ಚಿಕ್ಕೋಡಿ : ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದಿದೆ.
ಶಿಪಾ ಮುಬಾರಕ್ ಅವಟಿ (7) ಮೃತ ಬಾಲಕಿ. ಶಾಲೆಯಲ್ಲಿ ರಂಗಪಂಚಮಿ ಆಟವಾಡಿ ಮನೆಗೆ ಹೋಗುವಾಗ ಅಥಣಿಯಿಂದ ಹಾರೂಗೇರಿಗೆ ಹೋಗುತ್ತಿದ್ದ ಹಿಂದೆಯಿಂದ ಬಂದ ಟಾಟಾ ಏಸ್ ವಾಹನ ಜೋರಾಗಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇಸಾವನ್ನಪ್ಪಿದ್ದಾಳೆ.
ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಬಾಲಕಿ ಶಿಫಾಳ ಶವ ಪರೀಕ್ಷೆ ಮಾಡಿ ಮನೆಯವರಿಗೆ ನೀಡಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.