ಚಿಕ್ಕೋಡಿ: ಪಿಓಪಿ ಗಣಪತಿ ಬದಲು ಮಣ್ಣಿನ ಗಣಪತಿ ಪೂಜಿಸೋಣ. ಆ ಮೂಲಕ ನಾವೆಲ್ಲರೂ ಕೂಡಿ ಪರಿಸರ ಮಾಲಿನ್ಯ ತಡೆಗಟ್ಟೋಣ ಎಂದು ಡಿಸಿಎಂ ಲಕ್ಷ್ಮಣ ಸವದಿ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂಬುದು ತಮ್ಮಗೆಲ್ಲರಿಗೂ ಗೊತ್ತಿರುವ ವಿಚಾರ. ಪರಿಸರ ಮಾಲಿನ್ಯ ತಡೆಗಟ್ಟಿ ನಾವೆಲ್ಲರೂ ಸ್ವಸ್ಥವಾಗಿ ಜೀವಿಸಬೇಕೆಂದರೆ ಇದೂ ಕೂಡ ಒಂದು ಮಹತ್ವದ ಹೆಜ್ಜೆ. ಹೀಗಾಗಿ ಎಲ್ಲರೂ ಪರಿಸರ ಸ್ನೇಹಿ ಗಣಪನನ್ನ ಪೂಜಿಸಿ ಎಂದು ನಾಡಿನ ಎಲ್ಲ ಬಾಂಧವರಿಗೆ ವಿನಂತಿಸುತ್ತೇನೆ ಎಂದು ಡಿಸಿಎಂ ಸವದಿ ಹೇಳಿದರು.