ಚಿಕ್ಕೋಡಿ: ರಾಯಬಾಗ ತಾಲೂಕಿನ ಚೆನ್ನಮ್ಮ ವಸತಿ ನಿಲಯ ಮತ್ತು ಬೆಳಗಾವಿ ವಸತಿ ನಿಲಯದಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದ 47 ಜನರ ಆರೋಗ್ಯ ವರದಿ ನೆಗೆಟಿವ್ ಬಂದಿದ್ದರಿಂದ ಅವರೆಲ್ಲರನ್ನು ಬಿಡುಗಡೆ ಮಾಡಿ ಮನೆಗಳಿಗೆ ಕಳುಹಿಸಿಕೊಡಲಾಯಿತು.
ಕ್ವಾರಂಟೈನ್ಗೆ ಒಳಪಡಿಸಿದವರ ಆರೋಗ್ಯ ವರದಿ ನೆಗೆಟಿವ್ ಬಂದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ರಾಯಬಾಗ ತಾಲೂಕಿನ ಜನರು ನಿಟ್ಟಿಸಿರು ಬಿಡುವಂತೆ ಮಾಡಿದೆ. ಹಾರೂಗೇರಿ ವಸತಿ ನಿಲಯದಲ್ಲಿ ಕ್ವಾರಂಟೈನ್ನಲ್ಲಿ ಇಟ್ಟಿದ್ದ ಕುಡಚಿಯ 34 ಜನ, ನಾಗರಾಳ ಚೆನ್ನಮ್ಮ ವಸತಿ ನಿಲಯ ಹಾರೂಗೇರಿ, ರಾಯಬಾಗ ಮತ್ತು ನಸಲಾಪುರದಲ್ಲಿ ತಲಾ ಒಬ್ಬರು ಹಾಗೂ ಬೆಳಗಾವಿ ವಸತಿ ನಿಲಯದಲ್ಲಿ ಇಟ್ಟಿದ್ದ ಕುಡಚಿಯ 2 ಜನ ಮತ್ತು ರಾಯಬಾಗ ಪಟ್ಟಣದ 8 ಜನರನ್ನು ಬಿಡುಗಡೆ ಮಾಡಿ, ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು.
ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದವರನ್ನು ಬಿಡುಗಡೆ ಮಾಡಿ ಮನೆಗಳಿಗೆ ಕಳುಹಿಸಿಕೊಟ್ಟಿರುವ ವ್ಯಕ್ತಿಗಳಿಗೆ, ತಮ್ಮ ಮನೆಗಳಲ್ಲಿಯೇ 14 ದಿನಗಳವರೆಗೆ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ತಿಳಿಸಲಾಗಿದೆ.