ETV Bharat / state

ಸವದಿ ಸೋಲಿಸಲು ಅಥಣಿ ಜನ ತಯಾರಾಗಿ ಕುಳಿತಿದ್ದಾರೆ: ರಮೇಶ್ ಜಾರಕಿಹೊಳಿ

author img

By

Published : May 1, 2023, 3:17 PM IST

ಲಕ್ಷ್ಮಣ್ ಸವದಿ ದ್ವೇಷ ರಾಜಕಾರಣ ಮಾಡುತ್ತಾನೆ. ಅವನನ್ನು ನಂಬಬೇಡಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಚುನಾವಣಾ ಭಾಷಣ

ಚಿಕ್ಕೋಡಿ : ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ್ ಸವದಿ ನಡುವೆ ವಾಕ್ಸಮರ ಮುಂದುವರೆದಿದೆ. ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಕಾಗವಾಡ ತಾಲೂಕಿನ ಅನಂತಪುರದಲ್ಲಿ ರಮೇಶ್ ಜಾರಕಿಹೊಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಅಥಣಿ ಜನ ಒಳಗಿಂದೊಳಗೆ ತಯಾರಾಗಿ ಕುಳಿತಿದ್ದಾರೆ. ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ, ದುಡ್ಡು ಅವಂದಲ್ಲ, ಅದು ನಮ್ಮದು. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ. ಕಡೆ ಘಳಿಗೆಯಲ್ಲಿ ಸವದಿಗೆ ಸ್ವಾಭಿಮಾನ ಕಾಡ್ತಿದೆಯಂತೆ. ಎರಡು ವರ್ಷ ಆತ ಆರಾಮಾಗಿದ್ದ. ಚುನಾವಣೆ ಘೋಷಣೆಯಾದ ಬಳಿಕ ಇದೀಗ ಸ್ವಾಭಿಮಾನ ಕಾಡ್ತಿದೆ" ಎಂದು ಏಕವಚನದಲ್ಲೇ ಟೀಕಾಸಮರ ನಡೆಸಿದರು.

"ಗಂಡಸಾಗಿದ್ರೆ ಅದು ಶ್ರೀಮಂತ ಪಾಟೀಲ್. ಮಹೇಶ ಕುಮಟಳ್ಳಿ, ರಮೇಶ್ ಜಾರಕಿಹೊಳಿ​ ತಂದ ಸರ್ಕಾರದಲ್ಲಿ ಮಂತ್ರಿ ಆಗೋಲ್ಲ ಅಂತ ಸವದಿ ಹೇಳ್ಬೇಕಿತ್ತು. ಮುಂದೆ ಆರಿಸಿ ಬಂದು ಮಂತ್ರಿ ಆಗ್ತೀನಿ ಅಂದಿದ್ರೆ ಅವನಿಗೆ ಗಂಡ್ಸು ಅಂತ ಅಂತಿದ್ವಿ. ಆದರೆ ಸವದಿ ಓಡಿಹೋಗಿ ಮಂತ್ರಿಯಾದ. ಕೊನೆಗೆ ಚುನಾವಣೆ ಘೋಷಣೆಯಾದ ಬಳಿಕ ಅವನಿಗೆ ಸ್ವಾಭಿಮಾನ ಕಾಡಿತು. ಇಂತಹ ಬೋಗಸ್ ಸ್ವಾಭಿಮಾನ ಸವದಿಯದ್ದು" ಎಂದು ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

"ಒಂದು ದಿನವೂ ಸವದಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ. ಮೋಸ ಮಾಡುವುದೇ ಅವನ ಉದ್ದೇಶ. ಅಥಣಿ ಭಾಗದ ಜನ ಅವನಿಗೆ ಬುದ್ಧಿ ಕಲಿಸಬೇಕು. ಲಿಂಗಾಯತರು, ಎಸ್​ಸಿ, ಮರಾಠರು ಹಾಗೂ ಜೈನರಿರಬಹುದು ಎಲ್ಲರೂ ಕೂಡಾ ತಯಾರಾಗಿ ಕುಳಿತಿದ್ದಾರೆ" ಎಂದರು.

"ಸವದಿ ದ್ವೇಷ ರಾಜಕಾರಣ ಮಾಡ್ತಾನೆ. ಅವನನ್ನು ನಂಬಬೇಡಿ. ಅವನನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಿ. ಉಗಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸೋಕೆ ಕಳಿಸ್ತೀನಿ. ನಮಗೆ ವೈಯಕ್ತಿಕವಾಗಿ ದ್ರೋಹ ಮಾಡಿದ್ದಾನೆ" ಎಂದು ಕಾರ್ಯಕರ್ತರಿಗೆ ಜಾರಕಿಹೊಳಿ ಕರೆ ಕೊಟ್ಟರು.

ರಮೇಶ್ ಜಾರಕಿಹೊಳಿ ಅವರಿಗೆ ನನ್ನ ಮನೆಯನ್ನು ಅರ್ಧ ಖಾಲಿ ಮಾಡಿ ಕೊಡುತ್ತೇನೆ. ಬರುವುದಾದರೆ ಇಲ್ಲೇ ಬಂದು ಚುನಾವಣೆ ಮಾಡಲಿ ಎಂದು ಲಕ್ಷ್ಮಣ್ ಸವದಿ (ಏಪ್ರಿಲ್​ 15-2023)ರಂದು ಸವಾಲು ಹಾಕಿದ್ದರು. ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಈ ರೀತಿ ರಮೇಶ್​ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿಯಿಂದಲೇ ನಾನು ಬಿಜೆಪಿಯನ್ನು ಬಿಟ್ಟೆ: ಲಕ್ಷ್ಮಣ್ ಸವದಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.