ಬೆಳಗಾವಿ: ರಮೇಶ್ ಜಾರಕಿಹೊಳಿಯವರೊಂದಿಗೆ ಅನೇಕ ಶಾಸಕರಿದ್ದರು ಸದ್ಯ ಅವರೆಲ್ಲರೂ ರಾಜೀನಾಮೆ ನೀಡಿದ್ದು, ರಮೇಶ್ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಎಂಎಲ್ಸಿ ವಿವೇಕರಾವ್ ಪಾಟೀಲ್, ರಮೇಶ್ ಜಾರಕಿಹೊಳಿ ತೆರೆದ ಹೃದಯಿ ಹಾಗಾಗಿಯೇ ಅವರೊಂದಿಗೆ ಹಲವಾರು ಜನರಿರುತ್ತಾರೆ. ಈ ಬಾರಿ ಯಾರಿಗೂ ತಿಳಿಯದ ರೀತಿ ಶಾಸಕರು ರಾಜೀನಾಮೆ ನೀಡಿದ್ದು, ಸಂಜೆ ವೇಳೆಗೆ ಸರ್ಕಾರದ ಹಣೆಬರಹ ತಿಳಿಯಲಿದೆ ಎಂದರು.
ರಮೇಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂಎಲ್ಸಿ ವಿವೇಕರಾವ್ ಪಾಟೀಲ್ ಈಗಲೂ ರೆಬಲ್ ಶಾಸಕರ ನಡೆಗೆ ಸಮ್ಮತಿ ಸೂಚಿಸಿದ್ದಾರೆ. ಜೊತೆಗೆ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಸಸ್ಪೆನ್ಸ್ ಎಂದಿದ್ದಾರೆ.