ಬೆಳಗಾವಿ: ಇಷ್ಟು ದಿನ ಸೈಲೆಂಟ್ ಆಗಿದ್ದ ಸಾಹುಕಾರ ತಮ್ಮ ವಿರೋಧಿಗಳನ್ನು ಸೋಲಿಸಲು ಮತ್ತೊಮ್ಮೆ ಸಜ್ಜಾಗಿದ್ದಾರೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫೀಲ್ಡ್ಗೆ ಇಳಿದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಮೂಲಕ ಮತ್ತೆ ಚುನಾವಣೆ ವರ್ಷ ಶುರುವಾಗಿದ್ದು, ಬೆಳಗಾವಿ ರಾಜಕಾರಣ ರಂಗೇರಿದೆ.
ಗ್ರಾಮೀಣ ಕ್ಷೇತ್ರವೇ ಟಾರ್ಗೆಟ್: ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿರುವ ಸಾಹುಕಾರ್, ಗ್ರಾಮೀಣ ಕ್ಷೇತ್ರಗಳಾದ ಸಾಂಬರಾ, ಮೊದಗಾ, ಪಂಥ ಬಾಳೆಕುಂದ್ರಿ, ಮೋದಗಾ ಮಾರಿಹಾಳ ಗ್ರಾಮಗಳಿ ಭೇಟಿ ಮಾಡಿದ್ದಾರೆ. ಅಲ್ಲಿನ ಸ್ಥಳೀಯ ರಾಜಕೀಯ ನಾಯಕರನ್ನು ಭೇಟಿ ಮಾಡಿ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮರಾಠಾ ಮುಖಂಡರನ್ನು ಒಗ್ಗೂಡಿಸಿ ತಂತ್ರ: ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳೇ ಹೆಚ್ಚಾಗಿರುವ ಕಾರಣ ಇಲ್ಲಿನ ಮರಾಠಾ ಮುಖಂಡರನ್ನು ಒಗ್ಗೂಡಿಸಿ ಕೆಲಸ ಸಂಘಟನೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಮರಾಠಾ ಸಮುದಾಯದ ಮುಖಂಡ ನಾಗೇಶ್ ಮುನ್ನೋಳ್ಕರ ಅವರನ್ನ ಮುಖ್ಯಮಂತ್ರಿ ಹಾಗೂ ಕೇಂದ್ರದ ನಾಯಕರನ್ನು ಭೇಟಿ ಮಾಡಿಸುವ ಮೂಲಕ ಮರಾಠಾ ಸಮುದಾಯಯವನ್ನು ಒಗ್ಗೂಡಿಸಿಸಲು ಮುಂದಾಗಿದ್ದು, ಬಿಜೆಪಿ ಟಿಕೆಟ್ ನಿಡುವಂತೆ ವರಿಷ್ಠರಿಗೆ ಒತ್ತಾಯ ಮಾಡಿದ್ದಾರೆ ಎಂದು ಮಾತು ಕೇಳಿ ಬರುತ್ತಿವೆ.
ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವಿಗೆ ಓಡಾದಿದ್ದ ಸಾಹುಕಾರ್ ಇಂದು ಅವರ ವಿರುದ್ಧ ಬಿಜೆಪಿ ಪರ ಪ್ರಬಲ ಅಭ್ಯರ್ಥಿ ಹಾಕಲು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರದ ತಯಾರಿ: ಇವತ್ತು ಹೈ ವೋಲ್ಟೇಜ್ ಸಭೆ