ಅಥಣಿ: ಕೊರೊನಾ ಮಹಾಮಾರಿಯಿಂದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನರಾಗಿದ್ದು, ಇದಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಕಂಬನಿ ಮಿಡಿದಿದ್ದಾರೆ. ಪಟ್ಟನದಲ್ಲಿ ಸವಿತಾ ಸಮಾಜದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸಂತಾಪ ಸೂಚಿಸಿ ಮಾತನಾಡಿದರು.
ಅಶೋಕ್ ಗಸ್ತಿ ಓರ್ವ ಕಡು ಬಡತನದ ವ್ಯಕ್ತಿ. ಅಂತವರನ್ನ ಭಾರತೀಯ ಜನತಾ ಪಕ್ಷ ಗುರುತಿಸಿ ರಾಜ್ಯಸಭಾ ಸ್ಥಾನವನ್ನು ನೀಡಿತ್ತು. ಆದರೆ ದುರ್ದೈವ ಇವತ್ತು ನಾವು ವಿಧಿಯಾಟದಿಂದಾಗಿ ಕೊರೊನಾ ಮಹಾಮಾರಿ ಆವರಿಸಿ ಅಶೋಕ್ ಗಸ್ತಿ ಅವರನ್ನ ಕಳೆದುಕೊಂಡಿದ್ದೇವೆ.
ಅವರ ಅಗಲಿಕೆಯಿಂದಾಗಿ ಭಾರತೀಯ ಜನತಾ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಒಬ್ಬ ನಿಷ್ಠಾವಂತ ಕಾರ್ಯಕರ್ತರನ್ನು ಜನತಾ ಪಕ್ಷ ಕಳೆದುಕೊಂಡಿದೆ. ಇರುವುದಕ್ಕೆ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒರ್ವ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಭಾರತೀಯ ಜನತಾ ಪಕ್ಷದ ವರಿಷ್ಠರು ರಾಜ್ಯಸಭಾ ಸದಸ್ಯರನ್ನಾಗಿಸಿದ್ದರು. ಅವರನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ಭಗವಂತ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದರು.