ಬೆಳಗಾವಿ: ಏಕಾಏಕಿ ಸುರಿದ ಮಳೆಗೆ ಸುಳೇಭಾವಿಗೆ ಸಂಪರ್ಕ ಒದಗಿಸುವ ಮೋದಗಾ ಗ್ರಾಮ ಸೇತುವೆ ಜಲಾವೃತಗೊಂಡಿದ್ದು, ಎರಡೂ ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ.
ತಾಲೂಕಿನ ಕರಡಿಗುದ್ದಿ, ಮಾರೀಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಗೆ ಮೋದಗಾ ಸೇತುವೆ ಜಲಾವೃತಗೊಂಡಿದೆ. ಸುಳೇಭಾವಿ ಹಾಗೂ ಮೋದಗಾ ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗದಲ್ಲಿ ಮಳೆ ಆಗದಿದ್ದರೂ ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಕರಡಿಗುದ್ದಿ, ಹಣ್ಣಿಕೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆ ಆಗಿದೆ. ಗುಡ್ಡದ ಪ್ರದೇಶದಲ್ಲಿ ಮಳೆ ಸುರಿದಿದ್ದರಿಂದ ಕೆಳ ಭಾಗದಲ್ಲಿನ ಹಳ್ಳಗಳು ತುಂಬಿ ಹರಿಯುತ್ತಿವೆ.