ETV Bharat / state

ದೇಶಾದ್ಯಂತ 15 ಜೋಡಿ ರೈಲುಗಳ ಸಂಚಾರ: ಆನ್​​ಲೈನ್​​​ನಲ್ಲಿ ಮಾತ್ರ ಟಿಕೆಟ್​... ಸಚಿವ ಸುರೇಶ್​ ಅಂಗಡಿ - ರೈಲು ಸಂಚಾರ

ಸಾರ್ವಜನಿಕರಿಗಾಗಿ ರೈಲ್ವೆ ಇಲಾಖೆ ದೇಶಾದ್ಯಂತ 15 ಜೋಡಿ ರೈಲುಗಳ ಸೇವೆ ಆರಂಭಿಸಲಾಗುತ್ತಿದ್ದು, ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಮಾತ್ರ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದ್ದಾರೆ.

Minister Suresh Angadi
ಸಚಿವ ಸುರೇಶ್​ ಅಂಗಡಿ
author img

By

Published : May 11, 2020, 12:43 PM IST

ಬೆಳಗಾವಿ: ಸಾರ್ವಜನಿಕರ ಸೇವೆಗಾಗಿ ಇಡೀ ದೇಶಾದ್ಯಂತ 15 ಜೋಡಿ ರೈಲುಗಳನ್ನು ಆರಂಭಿಸಲಾಗುತ್ತಿದ್ದು, ಜನರು ಸುರಕ್ಷಿತವಾಗಿ ಪ್ರಯಾಣಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದು ರೈಲ್ವೆ ಇಲಾಖೆ ಮಂತ್ರಿಗಳಾದ ಪಿಯೂಷ್​ ಗೋಯಲ್ ಜೊತೆಗೆ ಚರ್ಚೆ ನಡೆಸಿದ ಬಳಿಕ‌ 15 ರೈಲುಗಳನ್ನು ಬಿಡಲು ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೂ ಸ್ಯಾನಿಟೈಸರ್ ಮಾಡಲಾಗುತ್ತದೆ. ಸಾರ್ವಜನಿಕರು ಕೂಡ ತಮ್ಮ ಸುರಕ್ಷತೆಗಾಗಿ ಸಾಮಾಜಿಕ‌ ಅಂತರ ಕಾಪಾಡಿಕೊಂಡು ಪ್ರಯಾಣಿಸಬೇಕಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್​ ಅಂಗಡಿ

ಇನ್ನು ರೈಲಿನಲ್ಲಿ ಏರ್ ಕಂಡಿಷನ್ ಬೋಗಿಗಳು ಮಾತ್ರ ಇರಲಿದ್ದು, ಸಾಮಾನ್ಯ ಹಾಗೂ ಆರ್ಡಿನರಿ ಬೋಗಿಗಳು ಇರುವುದಿಲ್ಲ. ರೈಲು ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಮಾತ್ರ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್​ ನೀಡಲಾಗುವುದಿಲ್ಲ. ಹೀಗಾಗಿ ಜನರು‌ ಸಂಯಮದಿಂದ ವರ್ತಿಸಬೇಕು ಎಂದರು.

ಮೆಟ್ರೋ ‌ಸಂಚಾರ‌ ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ, ಹಾಗಾಗಿ ರಾಜ್ಯಗಳೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಈಗ ಬಿಟ್ಟಿರುವ ರೈಲುಗಳ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ರೈಲುಗಳನ್ನು ಬಿಡುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.