ETV Bharat / state

'ಅಂಬೇಡ್ಕರ್ ಮನೆಗೆ ಹಾನಿ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಿ' - chikkodi news

ಮುಂಬೈನಲ್ಲಿರುವ ಅಂಬೇಡ್ಕರ್ ನಿವಾಸ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಾನಿ ಮಾಡಿರುವುದಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಚಿಕ್ಕೋಡಿಯಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

protesters demanded to death sentence for those who vandalised Ambedkar home
ಅಂಬೇಡ್ಕರ್ ಮನೆಗೆ ಹಾನಿ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡುವಂತೆ ಪ್ರತಿಭಟನಾಕಾರರ ಆಗ್ರಹಅಂಬೇಡ್ಕರ್ ಮನೆಗೆ ಹಾನಿ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡುವಂತೆ ಪ್ರತಿಭಟನಾಕಾರರ ಆಗ್ರಹ
author img

By

Published : Jul 9, 2020, 11:57 PM IST

ಚಿಕ್ಕೋಡಿ (ಬೆಳಗಾವಿ): ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂಬೈ ದಾದರ್​ನ ರಾಜ್​ ಗೃಹದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಪೀಠೋಪಕರಣ ಧ್ವಂಸ, ಕಲ್ಲು ತೂರಾಟ ಖಂಡಿಸಿ ಆರೋಪಿಗಳನ್ನು ಬಂಧಿಸಿ, ತಕ್ಷಣ ದೇಶದ್ರೋಹ ಮೊಕದ್ದಮೆಯಡಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಬೆಳಗಾವಿಯ ನಿಪ್ಪಾಣಿ ತಹಶೀಲ್ದಾರ್​​​​​​ಗೆ ವಂಚಿತ ಬಹುಜನ ಆಘಾಡಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ, ರೈತ ಸಂಘ, ದಲಿತ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಅಂಬೇಡ್ಕರ್ ಮನೆಗೆ ಹಾನಿ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡುವಂತೆ ಪ್ರತಿಭಟನಾಕಾರರ ಆಗ್ರಹ

ಮುಂಬೈನ ಅಂಬೇಡ್ಕರ್​​​ ನಿವಾಸದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳಲ್ಲಿ ದೃಶ್ಯಗಳು ಸೆರೆಯಾಗಿವೆ. ಕಿಡಿಗೇಡಿಗಳು ಮನೆಯ ಕಿಟಕಿಯ ಗಾಜಿನ ಗ್ಲಾಸ್, ಪೀಠೋಪಕರಣವನ್ನು ಕಲ್ಲು ಎಸೆದು ಸಂಪೂರ್ಣವಾಗಿ ಮನೆಯನ್ನು ಹಾನಿಗೊಳಿಸಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ತ್ಯಾಗರಾಜ ಕದಂ ಆಗ್ರಹಿಸಿ‌ದರು.

ಕೂಡಲೇ ಅವರನ್ನು ಬಂಧಿಸದೆ ಹೋದಲ್ಲಿ ಜಿಲ್ಲೆಯಾದ್ಯಂತ ಹಾಗೂ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.