ETV Bharat / state

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಸತ್ಯಾಗ್ರಹ

author img

By

Published : Nov 6, 2019, 7:41 PM IST

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಗ್ರ ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಕೇವಲ ಪ್ರತಿಭಟನೆ ಮಾಡುವುದೇ ಆಯ್ತು....ವಿಕಲಚೇತನರ ಕಷ್ಟ ಕೇಳುವರಾರು

ಬೆಳಗಾವಿ: ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಗ್ರ ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಸತ್ಯಾಗ್ರಹ ಕೈಗೊಂಡಿದ್ದಾರೆ.

ಕೇವಲ ಪ್ರತಿಭಟನೆ ಮಾಡುವುದೇ ಆಯ್ತು: ವಿಕಲಚೇತನರ ಕಷ್ಟ ಕೇಳುವರಾರು

ಇವರಿಗೆ ಅಂಗಾಂಗ ವೈಫಲ್ಯವಿದೆ. ಹಾಗಂತ ಇವರೇನು ಸುಮ್ಮನೆ ಮನೆಯಲ್ಲಿ ಕುಳಿತು ಜೀವನ ಸಾಗಿಸುವವರಲ್ಲ. ಅಂಗವೈಕಲ್ಯ ಮೆಟ್ಟಿ ನಿಂತು ಸರ್ಕಾರ ಹಾಗೂ ಸಮಾಜದ ಸೇವೆ ನಡೆಸುತ್ತಿರುವವರು. ಆದ್ರೆ ಇವರ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಮಾತ್ರ ತನಗೆ ಏನೂ ಗೊತ್ತಿಲ್ಲವೆಂಬಂತೆ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಹಲವು ವರ್ಷಗಳಿಂದ ಗ್ರಾಮ, ನಗರ ಮತ್ತು ತಾಲೂಕು ಪಂಚಾಯತ್​ನ ವಿವಿದೊದ್ದೇಶ ಯೋಜನೆಯ ಪುನರ್ವಸತಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವವರ ತಮ್ಮ ಬೇಡಿಕೆ ಮಾತ್ರ ಈಡೇರಿಲ್ಲವೆಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪುನರ್ವಸತಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪ್ರದೇಶದವರಿಗೆ ಮೂರು ಸಾವಿರ ಹಾಗೂ ನಗರ ಪ್ರದೇಶದವರಿಗೆ ಆರು ಸಾವಿರ ಸಹಾಯಧನ ನೀಡುತ್ತಿದೆ. ಸರ್ಕಾರ ನೀಡುವ ಈ ಅಲ್ಪ ಸಹಾಯಧನದಿಂದ ನಮ್ಮ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ ಎಂಬುದು ಇವರ ವಾದ. ಆದರೆ ಪುನರ್ವಸತಿ ಕಾರ್ಯಕರ್ತರಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಾರೆಂಬ ಅಪವಾದವೂ ಇದೆ. ಇಷ್ಟೆಲ್ಲ ಕಷ್ಟ ಎದುರಿಸಿ ಸಮಾಜದಲ್ಲಿ ಗೌರಯುತವಾಗಿ ಬದುಕುವ ಹಂಬಲ ಹೊಂದಿರುವ ವಿಕಲಚೇತನ ಕಾರ್ಯರ್ತರಿಗೆ ಸರ್ಕಾರದಿಂದ ಹೆಚ್ಚಿನ ರೂಪದಲ್ಲಿ ಸಹಾಯಧನದ ಅವಶ್ಯಕತೆ ಇದೆ.

Intro:ಕೇವಲ ಪ್ರತಿಭಟನೆ ಮಾಡುವುದೇ ಆಯ್ತು : ಸರ್ಕಾರ ನಮ್ಮಕಡೆಗೆ ನೋಡಲ್ಲ ವಿಕಲಚೇತನರ ಕಷ್ಟ ಕೇಳುವರಾರು

ಬೆಳಗಾವಿ : ಬೇಕೆ ಬೇಕು ನ್ಯಾಯ ಬೇಕು. ಇದು ಕಳೆದ ಹಲವು ವರ್ಷಗಳಿಂದ ಪುನರ್ ವಸತಿ ಕಾರ್ಯಕರ್ತರಾದ ವಿಕಲಚೇತನರು ಜಪಿಸುತ್ತಿರುವ ಮಂತ್ರ. ಆದರೆ ನೀವು ಎಷ್ಟೇ ಅರಚದಿದರು ನಮ್ಮ ಕಿವಿ ಕೇಳಿಸಲ್ಲ ಎಂಬ ನಡೆಯಲ್ಲಿ ಸರ್ಕಾರ ಇವೆರಡ ಮಧ್ಯೆ ಕೇವಲ ಮೂರು ಸಾವಿರ ರೂಪಾಯಿಗಳಿಗೆ ದಿನಂಪ್ರತಿ ದುಡಿಯುವ ಈ ವಿಶೇಷಚೇತನರ ಗೋಳು ಕೇಳುವವರಿಲ್ಲ.

Body:ದೇವರು ಇವರಿಗೆ ಅಂಗಾಂಗ ವೈಫಲ್ಯ ನೀಡಿದ್ದು ನಿಜ ಹಾಗಂತ ಇವರೇನು ಸುಮ್ಮನೆ ಮನೆಯಲ್ಲಿ ಕುಳಿತು ಜೀವನ ಸಾಗಿಸುವಂತವರಲ್ಲ. ಅಂಗವೈಕಲ್ಯ ಮೆಟ್ಟಿ ನಿಂತು ಸರ್ಕಾರ ಹಗೂ ಸಮಾಜದ ಸೇವೆ ನಡೆಸುತ್ತಿರುವವರು. ಆದರೆ ಇವರ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಮಾತ್ರ ಕೈಕಟ್ಟಿ ತನಗೆ ಯಾವುದು ಗೊತ್ತಿಲ್ಲ ಎಂಬಂತೆ . ಹೌದು ಕಳೆದ ಹಲವು ವರ್ಷಗಳಿಂದ ಗ್ರಾಮ, ನಗರ ಮತ್ತು ತಾಲ್ಲೂಕು ಪಂಚಾಯತಿಗಳಲ್ಲಿ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವವರ ಬೇಡಿಕೆ ಮಾತ್ರ ಈಡೇರಿಲ್ಲ.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ. ಸಮಗ್ರ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ. ಮತ್ತು ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪುನರ್ವಸತಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವಿಕಲಚೇತನಿಗೆ ಗ್ರಾಮೀಣ ಪ್ರದೇಶದವರಿಗೆ ಮೂರು ಸಾವಿರ ಹಾಗೂ ನಗರ ಪ್ರದೇಶದವರಿಗೆ ಆರು ಸಾವಿರ ಸಹಾಯಧನ ನೀಡುತ್ತಿದೆ. ಸರ್ಕಾರ ನೀಡುವ ಈ ಸಹಾಯಧನ ನಮ್ಮ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ ಎಂಬುದು ಇವರ ವಾದ.

Conclusion:ಸರ್ಕಾರ ನೀಡುವ ಮೂರು ಸಾವಿರ ಸಹಾಯಧನ ಇವರ ಪ್ರತಿನಿತ್ಯದ ಉಪಜೀವನ ಸಾಗಿಸಲು ಅಸಾಧ್ಯ. ಆದರೆ ಪುನರ್ ವಸತಿ ಕಾರ್ಯಕರ್ತರಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ಅಪವಾದವು ಇದೆ. ಇಷ್ಟೆಲ್ಲ ಕಷ್ಟ ಎದುರಿಸಿ ಸಮಾಜದಲ್ಲಿ ಗೌರಯುತವಾಗಿ ಬದುಕುವ ಹಂಬಲ ಹೊಂದಿರುವ ವಿಕಲಚೇತನ ಕಾರ್ಯರ್ತರಿಗೆ ಸರ್ಕಾರದಿಂದ ಹೆಚ್ಚಿನ ರೂಪದಲ್ಲಿ ಸಹಾಯಧನದ ಅವಶ್ಯಕತೆ ಇವರಿಗಿದೆ. ತಮ್ಮ ಅಂಗವೈಕಲ್ಯ ಮೆಟ್ಟಿ ನಿಂತು ಜನರ ಸೇವೆ ಮಾಡುತ್ತಿರುವ ಈ ವಿಕಲಚೇತನ ಕಾರ್ಯಕರ್ತರ ಕೂಗಿಗೆ ಸರ್ಕಾರ ಸ್ಪಂದಿಸುತ್ತಾ ಎಂದು ಕಾದು ನೋಡಬೇಕು.

ಬೈಟ್ : ಗೀತಾ ಅಬ್ಬಿಗೇರಿ ( ಪುನರ್ವಸತಿ ಕಾರ್ಯಕರ್ತೆ ರಾಮದುರ್ಗ)
: ಅರ್ಜುನ್ ದೇವರಮನಿ ( ಪುನರ್ವಸತಿ ಕಾರ್ಯಕರ್ತ ಸವದತ್ತಿ )

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.