ETV Bharat / state

ತರಾತುರಿಯಲ್ಲಿ ಮಾಡಿದ ಲಾಕ್​ಡೌನ್​ನಿಂದ ಸಮಸ್ಯೆಯಾಗಿದೆ: ಸತೀಶ್​​ ಜಾರಕಿಹೋಳಿ

author img

By

Published : Apr 26, 2020, 9:47 PM IST

ಕೊರೊನಾ ಹಿನ್ನೆಲೆ ಗೋಕಾಕ್​ ತಾಲೂಕಿನ ಕೊಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೋಳಿ, ಅಲ್ಲಿನ ಕುಂದು-ಕೊರತೆಗಳನ್ನು ವಿಚಾರಿಸಿದರು.

problem from lockdown: Satish Jarkiholi
ಸತೀಶ್​ ಜಾರಕಿಹೋಳಿ

ಚಿಕ್ಕೋಡಿ: ತರಾತುರಿಯಲ್ಲಿ ಮಾಡಿದ ಲಾಕ್​ಡೌನ್​ನಿಂದ ತುಂಬಾ ತೊಂದರೆಯಾಗಿದೆ. ಲಾಕ್​ಡೌನ್ ಮುಂಚೆ ಸಿಎಂಗಳ ಜೊತೆ ಚರ್ಚೆ ಮಾಡಬೇಕಿತ್ತು ಎಂದು ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೋಳಿ ಹೇಳಿದರು.

ಗೋಕಾಕ್​ ತಾಲೂಕಿನ ಕೊಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚಿಸಿ, ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿದರು. ನಂತರ ಮಾತನಾಡಿದ ಅವರು, ಕೊರಾನಾ ತಡೆಗಟ್ಟಲು ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅನೂಕೂಲವಾಗುಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದರು.

ಮೊದಲೇ ತಯಾರಿ‌ ಮಾಡಿಕೊಂಡು ಲಾಕ್​ಡೌನ್ ಮಾಡಬೇಕಿತ್ತು. ತುಂಬಾ ಗಡಬಿಡಿಯಲ್ಲಿ ಲಾಕ್​ಡೌನ್ ಮಾಡಿದ್ದಾರೆ. ಸಿಎಂಗಳ ಸಲಹೆ ಕೇಳಬೇಕಿತ್ತು. ತರಾತುರಿಯಲ್ಲಿ ಲಾಕ್​ಡೌನ್ ಮಾಡಿದ್ದರಿಂದ ಇಷ್ಟೆಲ್ಲಾ ತೊಂದರೆಯಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.