ETV Bharat / state

ಬೈಲಹೊಂಗಲ ಜೈಲಿನಿಂದ ಕೈದಿ ಪರಾರಿ - prisoner escaped from jail in belagavi

ಕೊಲೆ ಯತ್ನ, ಗಲಾಟೆ, ಜಾತಿ ನಿಂದನೆ ಸೇರಿ 6 ಪ್ರಕರಣದಲ್ಲಿ ಈತ ಭಾಗಿಯಾಗಿದ್ದನು. ಸಬ್ ಜೈಲು ಸಿಬ್ಬಂದಿ ಗಮನ ಬೇರೆ ಕಡೆ ಸೆಳೆದು ಕೀ ಬಳಸಿ ಮುಖ್ಯದ್ವಾರದಿಂದ ಕೈದಿ ಪರಾರಿಯಾಗಿದ್ದಾನೆ. ಇದು ಭದ್ರತೆಯ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ..

accused-escaped-from-jail-in-belagavi
ಖಾದಿರಸಾಬ್ ರಾಜೇಖಾನ್
author img

By

Published : Mar 18, 2022, 4:37 PM IST

ಬೆಳಗಾವಿ : ವಿಚಾರಣಾಧೀನ ಕೈದಿಯೋರ್ವ ಪರಾರಿಯಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ಬೈಲಹೊಂಗಲ ಜೈಲಿನಿಂದ ಕೈದಿ ಪರಾರಿ..

ಬೈಲಹೊಂಗಲ ಪಟ್ಟಣದಲ್ಲಿರುವ ಸಬ್ ಜೈಲಿನಿಂದ ಕೈದಿ ಪರಾರಿಯಾಗಿದ್ದಾನೆ. ಖಾದಿರಸಾಬ್ ರಾಜೇಖಾನ್(34) ಪರಾರಿಯಾದ ಕೈದಿ. ಕಳೆದ 15 ದಿನಗಳ ಹಿಂದೆಯಷ್ಟೇ ಮುರಗೋಡ ಪೊಲೀಸರು ಈತನನ್ನು ಬಂಧಿಸಿದ್ದರು.

ಕೊಲೆ ಯತ್ನ, ಗಲಾಟೆ, ಜಾತಿ ನಿಂದನೆ ಸೇರಿ 6 ಪ್ರಕರಣದಲ್ಲಿ ಈತ ಭಾಗಿಯಾಗಿದ್ದನು. ಸಬ್ ಜೈಲು ಸಿಬ್ಬಂದಿ ಗಮನ ಬೇರೆ ಕಡೆ ಸೆಳೆದು ಕೀ ಬಳಸಿ ಮುಖ್ಯದ್ವಾರದಿಂದ ಕೈದಿ ಪರಾರಿಯಾಗಿದ್ದಾನೆ. ಇದು ಭದ್ರತೆಯ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಮಹಾಲಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಎಸ್​ಟಿಗೆ ಶೇ.7.5 ರಷ್ಟು ಮೀಸಲಾತಿ.. ಕಾನೂನು ಸಚಿವರ ಭರವಸೆ ಬಳಿಕ ಧರಣಿ ಕೈಬಿಟ್ಟ ಕಾಂಗ್ರೆಸ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.