ದಾವಣಗೆರೆ: ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಬ್ಯಾನರ್ ಹಿಂದಿಮಯವಾಗಿದ್ದರಿಂದ ಕನ್ನಡ ಪರ ಹೋರಾಟಗಾರರು ಬ್ಯಾನರ್ಗೆ ಮಸಿ ಬಳಿದಿರುವ ಘಟನೆ ನಡೆದಿದೆ.
ನಗರದ ನಿಜಲಿಂಗಪ್ಪ ಲೇಔಟ್ನ ಜಿಲ್ಲಾಧಿಕಾರಿ ನಿವಾಸದ ಸಮೀಪವಿರುವ ರಿಂಗ್ ರಸ್ತೆಯ ಬಳಿ ಹಾಕಿದ್ದ ಬ್ಯಾನರ್ಗೆ ಮಸಿ ಬಳೆಯಲಾಗಿದೆ. ಶುಕ್ರವಾರದಂದು ದಾವಣಗೆರೆಯ ಜೆ ಎಚ್ ಪಟೇಲ್ ಬಡಾವಣೆಯಲ್ಲಿ ನೂತನವಾಗಿ 63ನೇಯ ಎಸ್ಟಿಪಿಐ ಉಪ ಕೇಂದ್ರ ಉದ್ಘಾಟನೆಗಾಗಿ ರಾಜೀವ್ ಚಂದ್ರಶೇಖರ್ ಅವರ ಬ್ಯಾನರ್ ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಗೈರಾಗಿದ್ದ ಕಾರಣ ವರ್ಚುವಲ್ ಮೂಲಕ ಉದ್ಘಾಟನೆ ಮಾಡಿದ್ದರು. ಆದರೇ ಬ್ಯಾನರ್ನಲ್ಲಿ ಕನ್ನಡ ಬದಲಿಗೆ ಹಿಂದಿ ಭಾಷೆಯನ್ನು ಬರೆದು ಸ್ವಾಗತ ಕೋರಲಾಗಿತ್ತು.
ಈ ಹಿನ್ನೆಲೆ ಬ್ಯಾನರ್ನಲ್ಲಿದ್ದ ರಾಜೀವ್ ಚಂದ್ರಶೇಖರ್ ಅವರ ಹೆಸರಿಗೆ ನವಕರ್ನಾಟಕ ಕನ್ನಡ ಸೇನೆ ದಾವಣಗೆರೆ ಜಿಲ್ಲಾ ಘಟಕದವರು ಮಸಿ ಬಳಿದಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡ ಅಕ್ಷರ ಬಳಸುವುದನ್ನು ಬಿಟ್ಟು ಹಿಂದಿ ಬಳಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಬಹು ವರ್ಷಗಳ ಕನಸು ನನಸು: ದಾವಣಗೆರೆಯಲ್ಲಿ ಆರಂಭವಾಯಿತು ಎಸ್ಟಿಪಿಐ ಉಪಕೇಂದ್ರ