ETV Bharat / state

ಕಳಪೆ ಕಾಮಗಾರಿ ಆರೋಪ: ಪ್ಯಾಚ್ ವರ್ಕ್‌ಗೆ ಮುಂದಾದ ಗುತ್ತಿಗೆದಾರ

ಕಳಪೆ ರಸ್ತೆ ಕಾಮಗಾರಿ ವಿರೋಧಿಸುತ್ತಿದ್ದಂತೆ ಗುತ್ತಿಗೆದಾರರು 24 ಗಂಟೆಯಲ್ಲಿ ರಸ್ತೆ ದುರಸ್ತಿಗೆ ಮುಂದಾಗಿರುವ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

Poor road work: Contractor decided for repair
ಕಳಪೆ ಕಾಮಗಾರಿ ಆರೋಪ: ಪ್ಯಾಚ್ ವರ್ಕ್‌ಗೆ ಮುಂದಾದ ಗುತ್ತಿಗೆದಾರ
author img

By

Published : Jul 25, 2020, 3:21 PM IST

ಚಿಕ್ಕೋಡಿ(ಬೆಳಗಾವಿ): ಕಳಪೆ ರಸ್ತೆ ಕಾಮಗಾರಿ ವಿರೋಧಿಸುತ್ತಿದ್ದಂತೆ ಗುತ್ತಿಗೆದಾರರು 24 ಗಂಟೆಯಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

ಕಳಪೆ ಕಾಮಗಾರಿ ಆರೋಪ: ಪ್ಯಾಚ್ ವರ್ಕ್‌ಗೆ ಮುಂದಾದ ಗುತ್ತಿಗೆದಾರ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಜತ್ರಾಟ ವೇಸ್‌ನಲ್ಲಿರುವ ಅಂಬೇಡ್ಕರ್ ಸರ್ಕಲ್​​​ವರೆಗಿನ ಕಾಮಗಾರಿ ಕಳಪೆಯಾಗಿದ್ದು, ರಸ್ತೆ ನಿರ್ಮಾಣವಾದ 15 ದಿನಗಳಲ್ಲಿಯೇ ಹದಗೆಟ್ಟಿತ್ತು. ಈ ಹಿನ್ನೆಲೆ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಧಾರಾಕಾರ ಮಳೆ ಬಂದಿದ್ದರಿಂದ ತರಾತುರಿಯಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಕಾಮಗಾರಿ ಮಾಡಿ ಮುಗಿಸಿದ್ದು, ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗುತ್ತಿಗೆದಾರ 24 ಗಂಟೆಗಳಲ್ಲಿಯೇ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.