ETV Bharat / state

ಬೆಳಗಾವಿ: ಸ್ಮಶಾನ ಭೂಮಿ ಕೊರತೆ ನೀಗಿಸಲು ಪಾಲಿಕೆ ಹೊಸ ಯೋಜನೆ - ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸ್ಮಶಾನಗಳಲ್ಲಿ ವಿವಿಧ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಜಾಗದ ಕೊರತೆಯಿಂದಾಗಿ ಬಹುಪಾಲು ಶವಗಳನ್ನು ಕಟ್ಟಿಗೆ ಮೂಲಕ ದಹಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗ್ಯಾಸ್​​​​ ಬಳಸಿ ಶವ ದಹನ ಕಾರ್ಯ ಮಾಡುವ ಚಿಂತನೆಗೂ ಪಾಲಿಕೆ ಮುಂದಾಗಿದೆ.

Policy Plan to Remedy Graveyard Land Shortage
ಸ್ಮಶಾನ ಭೂಮಿ ಕೊರತೆ ನೀಗಿಸಲು ಪಾಲಿಕೆ ಹೊಸ ಯೋಜನೆ
author img

By

Published : Feb 5, 2021, 4:43 PM IST

ಬೆಳಗಾವಿ: ಜನಸಂಖ್ಯೆ ಹೆಚ್ಚಳವಾದಂತೆ ನಗರಗಳು ಬೆಳವಣಿಗೆ ಹೊಂದುತ್ತಿವೆ. ಹೀಗಾಗಿ ನಗರಗಳಲ್ಲಿ ಜನವಸತಿ ಪ್ರದೇಶಗಳು ವಿಸ್ತಾರಗೊಳ್ಳುತ್ತಿವೆ. ಸ್ಮಶಾನಕ್ಕೆ ಮೀಸಲಿಟ್ಟ ಜಾಗಗಳಲ್ಲಿ ಇದೀಗ ಜನವಸತಿ ಪ್ರದೇಶಗಳು ತಲೆ ಎತ್ತುತ್ತಿವೆ. ನಗರ ಅಭಿವೃದ್ಧಿಯಾದಂತೆ ಬೆಳಗಾವಿಯಲ್ಲಿ ಸ್ಮಶಾನ ಜಾಗದ ಅಭಾವ ಸೃಷ್ಟಿಯಾಗಿದೆ. ಭವಿಷ್ಯದಲ್ಲಿಯೂ ಮತ್ತಷ್ಟು ಸಂಕಷ್ಟ ಎದುರಾಗಲೂಬಹುದು. ಈ ಕಾರಣಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಲು ಬೆಳಗಾವಿ ಮಹಾನಗರ ಪಾಲಿಕೆ ಹೊಸ ಐಡಿಯಾ ಕಂಡುಕೊಂಡಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 5 ಸ್ಮಶಾನಗಳಿವೆ. ಬೆಳಗಾವಿಯ ಸದಾಶಿವ ನಗರ, ವಡಗಾವ್, ಶಹಾಪುರ, ಚಿದಂಬರ ನಗರ ಹಾಗೂ ಅನಗೋಳದಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಮೀಸಲಿಡಲಾಗಿದೆ. ಇನ್ನು ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯಕ್ಕೆ ನಗರದಲ್ಲಿ ಪ್ರತ್ಯೇಕ ಸ್ಮಶಾನಗಳಿವೆ.

ಸ್ಮಶಾನ ಭೂಮಿ ಕೊರತೆ ನೀಗಿಸಲು ಪಾಲಿಕೆ ಹೊಸ ಯೋಜನೆ

ಶವಗಳನ್ನು ಸ್ಮಶಾನದಲ್ಲಿ ಹೂಳುವುದಕ್ಕಿಂತ ಸುಡುವುದಕ್ಕೆ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ಜನರಲ್ಲಿ ಜಾಗೃತಿಯನ್ನೂ ಮಹಾನಗರ ಪಾಲಿಕೆಯಿಂದ ಮೂಡಿಸಲಾಗುತ್ತಿದೆ. ಇದಕ್ಕೆ ನಗರವಾಸಿಗಳಿಂದಲೂ ಉತ್ತರ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ನಗರದಲ್ಲಿ ಶೇ. 60ರಷ್ಟು ಶವಗಳನ್ನು ಹೂಳದೇ ಸುಡಲಾಗುತ್ತಿದೆ. ಇದರಿಂದ ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಲಾಗಿದೆ. ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯ ಹೊರತುಪಡಿಸಿ ಉಳಿದ ಎಲ್ಲಾ ಸಮುದಾದವರು ಸುಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇನ್ನು ಮುಸ್ಲಿಂ ಹಾಗೂ ಲಿಂಗಾಯತ ಸಮುದಾಯಕ್ಕೆ ಅಗತ್ಯಕ್ಕೂ ಹೆಚ್ಚು ಜಾಗ ಮೀಸಲಿದ್ದು, ನಗರದಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗದ ಅಭಾವ ಸೃಷ್ಟಿಯಾಗಿಲ್ಲ. ಅಲ್ಲದೇ ಮಹಾನಗರ ಪಾಲಿಕೆಯ ಮನವಿಗೆ ಎಲ್ಲಾ ಧರ್ಮೀಯರೂ ಸಾಥ್ ನೀಡುತ್ತಿದ್ದಾರೆ.

ಶೀಘ್ರವೇ ಸ್ಮಶಾನಗಳಿಗೆ ಗ್ಯಾಸ್ ಸಂಪರ್ಕ

ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸ್ಮಶಾನಗಳಲ್ಲಿ ವಿವಿಧ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಆರಂಭದಲ್ಲಿ ಕಟ್ಟಿಗೆ ಮೂಲಕ ಶವಗಳನ್ನು ಸುಡಲಾಗುತ್ತಿತ್ತು. ಇದೀಗ ಇದರ ಪ್ರಮಾಣ ಕಡಿಮೆ ಮಾಡಲಾಗಿದೆ. ಒಂದು ಅಂತ್ಯಕ್ರಿಯೆಗೆ ಕನಿಷ್ಠ 4 ಟನ್ ಕಟ್ಟಿಗೆ ಅಗತ್ಯ ಬೀಳುತ್ತಿವೆ. ಈ ಕಾರಣಕ್ಕೆ ಶವ ಸುಡಲು ವಿದ್ಯುತ್ ಹಾಗೂ ಡೀಸೆಲ್​​​​​ ಯಂತ್ರ ಅಳವಡಿಸಲಾಗಿದೆ. ಡೀಸೆಲ್​​ ಹಾಗೂ ಕಟ್ಟಿಗೆಯಿಂದ ಹೊಗೆ ಬಂದು ಪರಿಸರಕ್ಕೆ ಹಾನಿಯಾಗುತ್ತಿರುವ ಕಾರಣಕ್ಕೆ ಸ್ಮಶಾನಕ್ಕೆ ಗ್ಯಾಸ್ ಸಂಪರ್ಕ ಪಡೆಯಲು ಪಾಲಿಕೆ ನಿರ್ಧರಿಸಿದೆ.

ಈಗಾಗಲೇ ಮಹಾನಗರದ ಎಲ್ಲೆಡೆ ಗ್ಯಾಸ್ ಪೈಪ್‍ಲೈನ್ ಅಳವಡಿಸಲಾಗಿದೆ. ಡೀಸೆಲ್ ಯಂತ್ರಗಳು ಗ್ಯಾಸ್ ಮೂಲಕವೂ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಶವ ಸುಡಲು ಗ್ಯಾಸ್ ಬಳಕೆ ಕಡ್ಡಾಯ ಮಾಡಲು ಪಾಲಿಕೆ ನಿರ್ಧರಿಸಿದೆ.

ಇನ್ನು ಜಿಲ್ಲೆಯಾದ್ಯಂತ ದೇಹದಾನ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ತರಗತಿಗಾಗಿ ಮೃತರ ದೇಹಗಳನ್ನು ಬೆಳಗಾವಿಯ ಬೀಮ್ಸ್ ಹಾಗೂ ಕೆಎಲ್‍ಇ ಆಸ್ಪತ್ರೆಗೆ ಕುಟುಂಬಸ್ಥರು ಶವಗಳನ್ನು ನೀಡುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಸಂಜಯ್ ಡುಮ್ಮಗೋಳ, ವಿಪರೀತ ಬೆಳವಣಿಗೆ ಹೊಂದಿದ ನಗರಗಳಲ್ಲಿ ಈಗಾಗಲೇ ಸುಡುವ ಮೂಲಕವೇ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ. ಬೆಳಗಾವಿಯಲ್ಲಿ ಈಗಲೇ ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದವರು ತಮ್ಮ ಪದ್ಧತಿಯಂತೆ ಶವ ಹೂಳುತ್ತಿದ್ದಾರೆ. ಆದರೆ ಉಳಿದ ಸಮುದಾಯದವರು ಶವ ಸುಡಲು ಸಮ್ಮತಿಸುತ್ತಿದ್ದಾರೆ. ಈ ಸಂಬಂಧ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳುತ್ತಿದ್ದೇವೆ ಎಂದರು.

ಇದನ್ನೂ ಓದಿ: ಹೆಚ್ಚುತ್ತಿರುವ ಜನಸಂಖ್ಯೆ: ಅಧಿಕವಾಗುತ್ತಿದೆ ಸಮಾಧಿ ಜಾಗದ ಕೊರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.