ETV Bharat / state

ಬೆಳಗಾವಿಗೆ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ ಪೊಲೀಸರು - ಶಿವಸೇನೆ ಪುಂಡಾಟಿಕೆ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿರುವ ಕೊಗನೊಳ್ಳಿ ಚೆಕ್​ ಪೋಸ್ಟ್ ಮೂಲಕ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಣದ ಶಿವಸೇನೆ ಕೊಲ್ಲಾಪುರ ಅಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಬೆಳಗಾವಿ ಪ್ರವೇಶಿಸಲು ಮುಂದಾಗಿದ್ದರು. ಆದ್ರೆ ಅವರಿಗೆ ಪೊಲೀಸರು ಬ್ರೇಕ್​ ಹಾಕಿದ್ದಾರೆ.

ಶಿವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
ಶಿವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
author img

By

Published : Oct 31, 2022, 4:16 PM IST

ಚಿಕ್ಕೋಡಿ(ಬೆಳಗಾವಿ): ಗಡಿಯಲ್ಲಿ ಶಿವಸೇನೆ ಪುಂಡರು ನಡೆಸುತ್ತಿದ್ದ ಉದ್ಧಟತನಕ್ಕೆ ಬೆಳಗಾವಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಎಂಇಎಸ್ ನಡೆಸುತ್ತಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ಬರುತ್ತಿದ್ದ 50ಕ್ಕೂ ಅಧಿಕ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರನ್ನು ಗಡಿಯಿಂದ ವಾಪಸ್ ಕಳುಹಿಸಿದ್ದಾರೆ.

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿರುವ ಕೊಗನೊಳ್ಳಿ ಚೆಕ್​​ ಪೋಸ್ಟ್ ಮೂಲಕ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಮಹಾರಾಷ್ಟ್ರದ ಉದ್ಧವ್​ ಠಾಕ್ರೆ ಬಣದ ಶಿವಸೇನೆ ಕೊಲ್ಲಾಪುರ ಅಧ್ಯಕ್ಷ ವಿಜಯ್​ ದೇವಣೆ ನೇತೃತ್ವದಲ್ಲಿ ಬೆಳಗಾವಿ ಪ್ರವೇಶ ಬಯಸಿದ್ದರು.

ಕೈಯಲ್ಲಿ ವಿಜಯ ಜ್ಯೋತಿ ಹಿಡಿದು ಬೆಳಗಾವಿಯಲ್ಲಿ ನಾಳೆ ನಡೆಯುವ ಕನ್ನಡ ರಾಜ್ಯೋತ್ಸವ ವಿರುದ್ಧವಾಗಿ ಎಂಇಎಸ್ ನವರು ಕರಾಳ ದಿನಾಚರಣೆ ನಡೆಸುತ್ತಿದ್ದಾರೆ. ಆ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ವಿಜಯ್​ ದೇವಣೆ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗಾವಿಗೆ ಪ್ರವೇಶಿಸಲು ಯತ್ನಿಸಿದರು.

ಶಿವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಈ ವೇಳೆ ಶಿವಸೇನೆ ಪುಂಡಾಟಿಕೆಗೆ ಗಡಿಯಲ್ಲೇ ಬ್ರೇಕ್ ಹಾಕಿದರು. ಈ ವೇಳೆ ಠಾಕ್ರೆ ಬಣದ ಶಿವಸೇನೆ ಹಾಗೂ ಕರ್ನಾಟಕ ಪೊಲೀಸರ ನಡುವೆ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಅರ್ಧಗಂಟೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ವಾಪಸ್ ತೆರಳಿದರು.

ಓದಿ: 40 ಪರ್ಸೆಂಟ್ ಕಮಿಷನ್ ವಿರುದ್ಧ ಕಾಂಗ್ರೆಸ್ ಮುಖಂಡರ ಪ್ರತಿಭಟನೆ: ಹುಬ್ಬಳ್ಳಿ ಬಿಜೆಪಿ ಕಚೇರಿ ಎದುರು ಹೈಡ್ರಾಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.