ETV Bharat / state

ಮನಸೋಇಚ್ಛೆ ವಾಹನ ನಿಲ್ಲಿಸಿದ ಸವಾರರಿಗೆ ಬಿಸಿ ಮುಟ್ಟಿಸಿದ ಅಥಣಿ ಪೊಲೀಸರು

ಅಥಣಿ ಪೊಲೀಸರು ಹಾಗೂ ಪುರಸಭೆಯವರು ಪಟ್ಟಣದಲ್ಲಿ ವ್ಯವಸ್ಥಿತವಾಗಿ ವಾಹನ ನಿಲ್ಲಿಸಿ ಎಂದು ಎಷ್ಟೇ ಬಾರಿ ಮನವಿ ಮಾಡಿಕೊಂಡರೂ, ಸಾರ್ವಜನಿಕರು ಕಿವಿಗೊಡದೆ ಇದ್ದಿದ್ದರಿಂದ ವಾಹನ ಸವಾರರಿಗೆ ಇದೀಗ ಬಿಸಿ ಮುಟ್ಟಿಸಿದ್ದಾರೆ.

author img

By

Published : Jun 14, 2020, 1:44 PM IST

police seized Two wheelers at Athani
ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಇಲಾಖೆ

ಅಥಣಿ: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕ ಪಕ್ಕದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕ್ ಮಾಡುವವರಿಗೆ ತಾಲೂಕಿನ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಅಥಣಿ ಪೊಲೀಸರು

ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಇರುವುದರಿಂದ, ವಾಹನಗಳ ದಟ್ಟಣೆ ಸಾಮಾನ್ಯವಾಗಿದೆ. ಅದರಲ್ಲೂ ಹಳ್ಳಿಗಳಿಂದ ಬರುವ ಜನಸಾಮಾನ್ಯರು, ಬ್ಯಾಂಕ್, ಆಸ್ಪತ್ರೆ, ಸರ್ಕಾರಿ ಕಚೇರಿಗಳ ಕೆಲಸಕ್ಕೆ ಬರುವವರು ರಾಜ್ಯ ಹೆದ್ದಾರಿಗಳ ಅಕ್ಕಪಕ್ಕ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುವುದರಿಂದ ವಾಹನದಟ್ಟಣೆ ಅಧಿಕವಾಗಿದೆ. ಈ ಹಿನ್ನೆಲೆ ತಾಲೂಕಿನ ಪೊಲೀಸರು ದ್ವಿಚಕ್ರ ವಾಹನಗಳ ಪ್ಲಗ್ ಕಿತ್ತುಕೊಂಡು ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಪೊಲೀಸರು ಹಾಗೂ ಪುರಸಭೆಯವರು ಪಟ್ಟಣದಲ್ಲಿ ವ್ಯವಸ್ಥಿತವಾಗಿ ವಾಹನ ನಿಲ್ಲಿಸಿ ಎಂದು ಎಷ್ಟೇ ಬಾರಿ ಮನವಿ ಮಾಡಿಕೊಂಡರೂ, ಸಾರ್ವಜನಿಕರು ಕಿವಿಗೊಡದೆ ಇದ್ದಿದ್ದರಿಂದ ವಾಹನ ಸವಾರರ ಮೇಲೆ ಈ ಕ್ರಮಕ್ಕೆ ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.