ಬೆಳಗಾವಿ : ಕಳೆದ 5-6 ದಿನಗಳಿಂದ ನಿರಂತರವಾಗಿ ಸುರಿಯುತ್ತಿವ ಮಳೆಯಿಂದಾಗಿ ಎಲ್ಲ ಡ್ಯಾಮ್, ಕೆರೆ, ಕಟ್ಟೆಗಳು ತುಂಬಿ ಹೋಗಿವೆ. ಎಲ್ಲೆಂದರಲ್ಲಿ ನೀರು ನುಗ್ಗುತ್ತಿದ್ದು, ಕೆಲ ಜನ ಪ್ರಾಣ ಭೀತಿಯಲ್ಲಿದ್ದಾರೆ. ಆದರೆ, ಇನ್ನೊಂದೆಡೆ ಕೆಲ ಯುವಕರು ಡಿಜೆ ಹಚ್ಚಿ ಮಳೆಯನ್ನು ಸಂಭ್ರಮಿಸಿದರು.
ಧಾರಾಕಾರ ಮಳೆಯ ಮಧ್ಯೆ ಡಿಜೆಗೆ ಸ್ಟೆಪ್ :
ಕಳೆದ 5-6 ದಿನಗಳಿಂದ ನಿರಂತರವಾಗಿ ಸುರಿಯುತ್ತಿವ ಮಳೆಯಿಂದಾಗಿ ಎಲ್ಲ ಡ್ಯಾಮ್, ಕೆರೆ, ಕಟ್ಟೆಗಳು ತುಂಬಿ ಹೋಗಿವೆ. ಎಲ್ಲೆಂದರಲ್ಲಿ ನೀರು ನುಗ್ಗುತ್ತಿದ್ದು, ಕೆಲ ಜನ ಪ್ರಾಣಭೀತಿಯಲ್ಲಿದ್ದಾರೆ. ಆದರೆ, ಇನ್ನೊಂದೆಡೆ ಕೆಲ ಯುವಕರು ಡಿಜೆ ಹಚ್ಚಿ ಮಳೆಯನ್ನು ಸಂಭ್ರಮಿಸಿದರು
ಕೊಚ್ಚಿ ಹೋಗುತ್ತಿದ್ದ ಬೈಕ್ ಹಾಗೂ ಸವಾರನ ರಕ್ಷಣೆ :
ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಹಾಗೂ ಸವಾರನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಜೋಡಕುರಳಿ ಗ್ರಾಮದ ಸಂತುಬಾಯಿ ಹಳ್ಳ, ಭಾರೀ ಮಳೆಯಿಂದ ತುಂಬಿಹರಿಯುತ್ತಿತ್ತು. ಈ ವೇಳೆ ಹಳ್ಳ ದಾಟಲು ಯತ್ನಿಸಿದ ಬೈಕ್ ಸವಾರ ಮಹೇಶ ಎಂಬ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ವೇದಗಂಗಾ ನದಿಯಲ್ಲಿ ಸಿಲುಕಿದ್ದ 3 ಜನರ ರಕ್ಷಣೆ :
ಕಾರದಗಾ-ಬೋಜ ಸೇತುವೆಯಲ್ಲಿ ಸಿಲುಕಿದ್ದ ಮೂವರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೊರಗಾಂವ ಗ್ರಾಮದ ಚೇತನ ಯಲಗುಡೆ, ಅಕ್ಷಯ ಪೊಕಲೆ, ಪ್ರಶಾಂತ ಕಾಂಬಳೆ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಗಳು. ಇವರು ಕಾರದಗಾ - ಬೋಜ ಸೇತುವೆಯನ್ನು ದಾಟಲು ಯತ್ನಿಸಿದಾಗ ನೀರಿನ ಹರಿವಿನ ಮಟ್ಟ ಹೆಚ್ಚಾಗಿರುವುದು ತಿಳಿಯದೇ ಮುಂದೆ ಸಾಗಿದ್ದಾರೆ. ನಂತರ ಮರಳಿ ಬರಲು ಅಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿದ್ದರು.
15 ಕ್ಕೂ ಹೆಚ್ಚು ದೇವಸ್ಥಾನಗಳು ಮುಳುಗಡೆ :
ರಾಯಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದ ಸುಗಂಧಾ ದೇವಿ ದೇವಸ್ಥಾನ, ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ, ಕಾರದಗಾ ಗ್ರಾಮದ ಬಂಗಾಲಿಬಾಬಾ ದರ್ಗಾ, ಸದಲಗಾ ಗ್ರಾಮದ ಹನುಮಾನ ಮಂದಿರ, ಹುಕ್ಕೇರಿ ತಾಲೂಕಿನ ಕೊಟಬಾಗಿಯ ದುರ್ಗಾ ದೇವಿ ದೇವಸ್ಥಾನ, ಹೊಳೆಮ್ಮ ದೇವಸ್ಥಾನ, ಮಹಾರಾಷ್ಟ್ರದ ಗಡಿಭಾಗ ನರಸಿಂಹವಾಡಿಯ ದತ್ತಮಂದಿರ ಜಲಾವೃತಗೊಂಡಿವೆ.
ರಕ್ಷಣೆಗಾಗಿ ದೇವರ ಮೊರೆ :
ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಭಕ್ತರು ದೂರದಿಂದಲೇ ಲಕ್ಷ್ಮೀ ದೇವಿಗೆ ಪೂಜೆ ಮಾಡಿ, ನಮ್ಮನ್ನು ಕಾಪಾಡು ತಾಯಿ ಎಂದು ಪ್ರಾರ್ಥಿಸಿದರು. ಬೆಳಗಾವಿ - ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ, ಮಳೆ ಹೆಚ್ಚಾಗಿ ಹೆದ್ದಾರಿಗೆ ನುಗ್ಗಿದ್ದು ಸಂಚಾರ ಸ್ಥಗಿತಗೊಂಡಿದೆ. ಕೆಲವಡೆ ರಸ್ತೆ ಬಿರುಕು ಬಿಟ್ಟಿವೆ. ಇನ್ನೂ ಕೆಲವಡೆ ನದಿ ಭಾಗದ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿತ್ತಿದೆ. ಅಷ್ಟೇ ಅಲ್ಲದೆ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳ ರಜಾ ಅವಧಿಯನ್ನು ಜಿಲಾಧಿಕಾರಿಗಳು ವಿಸ್ತರಿಸಿದ್ದಾರೆ. ಒಟ್ಟಿನಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗುತ್ತಿದ್ದು, ಕುಂದಾನಗರಿಯ ಜನ ಜಲಕಂಟಕದಿಂದ ನಲುಗಿ ಹೋಗಿದ್ದಾರೆ.