ಚಿಕ್ಕೋಡಿ: ಕಳೆದ ಒಂದು ವಾರದಿಂದ ಪ್ರವಾಹದಲ್ಲಿ ಸಿಲುಕಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೀರಡಿ ಗ್ರಾಮಸ್ಥರನ್ನು ಶಾಸಕ ದುರ್ಯೋಧನ ಐಹೊಳೆ ಭೇಟಿಯಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಬಾರಿ ಪರಿಹಾರ ಸಿಗಲಿಲ್ಲ. ಈ ಬಾರಿಯಾದರೂ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಟಾಚಾರಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದೀರಾ?. ಏನಾದರೂ ಕೆಲಸ ಇದ್ದರೆ ಅಧಿಕಾರಿ ಹಾಗೂ ನಿಮ್ಮ ಪುತ್ರ ಬರುತ್ತಾರೆ. ನೀವೇಕೆ ನಮ್ಮ ಗ್ರಾಮಕ್ಕೆ ಬರುವುದಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿ ಪಬ್ಲಿಕ್ ಪಾರ್ಕ್ನಲ್ಲಿ ಮೊಬೈಲ್ ಕಳವು: ಪರಾರಿಯಾಗಲು ಯತ್ನ, ಬಾವಿಗೆ ಬಿದ್ದು ಆರೋಪಿ ಸಾವು