ETV Bharat / state

ಸಂಡೇ ಲಾಕ್​ಡೌನ್.. ‌ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಕುಂದಾ ನಗರಿಯ ಮಂದಿ.. - sunday lockdown

ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಜಾರಿಗೆ ತಂದಿದ್ದರೂ ಬೆಳಗಾವಿ ಜನರು ಮಾತ್ರ ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ..

people in Belgavi violates the lockdown rules
ಸಂಡೇ ಲಾಕ್​ಡೌನ್
author img

By

Published : Jul 12, 2020, 2:33 PM IST

ಬೆಳಗಾವಿ : ಮಾರಕ ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ಇಂದು ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​​​ ಜಾರಿಗೊಳಿಸಲಾಗಿದೆ. ಹೀಗಿದ್ದರೂ ಕೂಡಾ ಕುಂದಾನಗರಿಯಲ್ಲಿನ ಜನರು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ರಸ್ತೆಗಿಳಿದಿದ್ದಾರೆ.

ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಕುಂದಾ ನಗರಿಯ ಮಂದಿ
ನಗರದ ಚೆನ್ನಮ್ಮ ವೃತ್ತದಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಮುಂದಾದ ಸವಾರರಿಗೆ ಕಡಿವಾಣ ಹಾಕಿದ ಪೊಲೀಸರು ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಉಳಿದೆಡೆ ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಹೀಗಿದ್ದರೂ, ಸಾರ್ವಜನಿಕರ ಸಂಚಾರ ಮಾತ್ರ ಮುಂದುವರೆದಿದೆ. ಇನ್ನು, ಕೆಲವರು ಅಗತ್ಯ ವಸ್ತುಗಳ ನೆಪ ಮಾಡಿಕೊಂಡು‌ ಬೇಕಾಬಿಟ್ಟಿ ಸಂಚರಿಸುವುದು ಕಂಡು ಬರುತ್ತಿದೆ. ಇದರ ಮಧ್ಯೆ ನಿಜವಾಗಿಯೂ ಸಂಕಷ್ಟದಲ್ಲಿರೋ ಜನರು ಮಾತ್ರ ಖಾಕಿ ಹಾಗೂ ಕೊರೊನಾ ಭಯಕ್ಕೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.