ಬೆಳಗಾವಿ: ಪಡಿತರ ಧಾನ್ಯ ವಿತರಣೆ ಸಂದರ್ಭದಲ್ಲಿ ರೇಷನ್ ಅಂಗಡಿಗಳ್ಳಿ ಬಯೋ ಮೆಟ್ರಿಕ್ ಪದ್ದತಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದು. ಕಳೆದ ಮೂರ್ನಾಲ್ಕು ದಿನಗಳು ಬೆಳಗಾವಿಯ ಅಗಸಗಿ ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಬ್ಬೆಟ್ಟಿನ ಗುರುತು ಪಡೆಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಗಸಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ. ಪಡಿತರ ವಿತರಣೆಗೆ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ಜನಸಾಮಾನ್ಯರು ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ. ಅಗಸಗಿ ಗ್ರಾಮದಲ್ಲಿ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪಡಿತರ ಚೀಟಿಗಳಿದ್ದು ಪಲಾನುಭವಿಗಳಿಗೆ ಹೆಬ್ಬಟ್ಟಿನ ಗುರುತನ್ನು ತೆಗೆದುಕೊಳ್ಳುವುದರ ಮೂಲಕ ರೇಷನ್ ವಿತರಣೆ ಮಾಡಲಾಗುತ್ತಿದೆ.
ಆದರೆ ಈ ಗ್ರಾಮವು ತಗ್ಗು ಪ್ರದೇಶದಲ್ಲಿರುವುದರಿಂದ ನೆಟ್ ವರ್ಕ್ ಸಮಸ್ಯೆಯು ಉದ್ಭವವಾಗುತ್ತಿದ್ದು ಪ್ರತಿದಿನ ಕೇವಲ 30 ರಿಂದ 40 ಜನರಿಗೆ ಮಾತ್ರ ರೇಷನ ವಿತರಣೆ ಮಾಡಲಾಗುತ್ತಿದ್ದು ಇದರಿಂದ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ದರಿಂದ ತಂತ್ರಜ್ಙಾನ ವ್ಯವಸ್ಥೆಯನ್ನು ತೆಗೆದುಹಾಕಿ ಹಳೆ ಮಾದರಿಯಲ್ಲಿ ರೇಷನ್ ವಿತರಿಸಬೇಕೆಂದು ಜನರು ಆಗ್ರಹಿಸಿದರು.