ಅಥಣಿ: ದೇಶಾದ್ಯಂತ ಇಂದು 71ನೇ ಗಣರಾಜ್ಯೋತ್ಸವ ಕಳೆಗಟ್ಟಿದೆ. ಪ್ರತಿ ಸರ್ಕಾರಿ ಕಚೇರಿ, ಸಂಸ್ಥೆಗಳು, ವಿವಿಧ ಸಂಘಟನೆಗಳು, ಶಾಲಾ- ಕಾಲೇಜುಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಯಿತು.
ಅದೇ ರೀತಿ ಗಡಿನಾಡು ಮಹಾರಾಷ್ಟ್ರದ ರಾಜ್ಯದ ಸೊಲ್ಲಾಪುರದ ಜಿಲ್ಲೆಯ ಪಂಡರಾಪುರ ವಿಠ್ಠಲ-ರುಕ್ಮಿಣಿ ದೇವಾಸ್ಥಾನದಲ್ಲಿ ರಾಷ್ಟ್ರ ಪ್ರೇಮ ಮೆರೆಯಲಾಗಿದೆ. ಇಂದು ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪಾಂಡುರಂಗ ದೇವಸ್ಥಾನ ಸಂಪೂರ್ಣ ಕೇಸರಿ, ಬಿಳಿ, ಹಸಿರು, ಬಣ್ಣದಿಂದ ಕಂಗೊಳಿಸುತ್ತಿದೆ.
ವಿಠ್ಠಲ-ರುಕ್ಮಿಣಿ ದೇವಾಸ್ಥಾನ ಗರ್ಭಗುಡಿ ಮತ್ತು ವಿಠ್ಠಲ ರುಕ್ಮಿಣಿ ಮೂಲ ವಿಗ್ರಹಕ್ಕೆ ರಾಷ್ಟ್ರಧ್ವಜ ಹೊಂದಿರುವ ಬಣ್ಣಗಳ ಹೂವಿನಿಂದ ಅಲಂಕಾರ ಮಾಡಿದ್ದಾರೆ. ಇಂದು ರಜಾ ದಿನದಂದು ಲಕ್ಷಾಂತರ ಭಕ್ತರು ಬರುವ ಹಿನ್ನಲೆ ದೇವರ ಮೇಲಿನ ಭಕ್ತಿ ಜೊತೆಗೆ ರಾಷ್ಟ್ರೀಯ ಭಕ್ತಿಯೂ ಹೆಚ್ಚುತ್ತಿದೆ.