ETV Bharat / state

ನೀರು ಕುಡಿಯಲು ಹೋದ ಎತ್ತುಗಳು ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ಸಾವು

ನದಿ ದಂಡೆಯಲ್ಲಿಯೇ ಹುಲ್ಲನ್ನು ಮೇಯುತ್ತಿದ್ದ ಎತ್ತುಗಳು ಬಾಯಾರಿಕೆಗಾಗಿ ನೀರು ಕುಡಿಯಲು ನದಿಗೆ ಇಳಿದಿವೆ. ಈ ಸಂದರ್ಭದಲ್ಲಿ ಒಂದರ ಹಗ್ಗ ಒಂದಕ್ಕೆ ತಗುಲಿ ಗಂಟು ಬಿದ್ದು ಕುತ್ತಿಗೆಗೆ ಬಿಗಿಯಾಗಿ ನೀರಲ್ಲಿ ಮುಳುಗಿವೆ.

ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದ ಎತ್ತುಗಳು
author img

By

Published : Jul 5, 2019, 8:06 PM IST

ಚಿಕ್ಕೋಡಿ: ಕೃಷ್ಣಾ ನದಿ ದಂಡೆಗೆ ಎತ್ತುಗಳನ್ನು ಮೇಯಲು ಬಿಟ್ಟಾಗ ನೀರು ಕುಡಿಯಲು ಹೋಗಿ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋದ‌ ಘಟನೆ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ನಡೆದಿದೆ.

ನಂದೇಶ್ವರ ಗ್ರಾಮದ ಗುಂಡುರಾವ ಯಲ್ಲಪ್ಪ ಲಾಲಸಿಂಗೆ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿದ್ದು, ಸುಮಾರು 2 ಲಕ್ಷ ಬೆಲೆ ಬಾಳುವ ಎತ್ತುಗಳು ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಎಂದಿನಂತೆ ರೈತ ಯಲ್ಲಪ್ಪ ಕೃಷ್ಣಾ ನದಿಯ ದಡದಲ್ಲಿರುವ ಮೇವಿನ ಗದ್ದೆಗೆ ಎತ್ತುಗಳನ್ನು ಕರೆದುಕೊಂಡು ಹೋಗಿದ್ದಾನೆ. ನದಿ ದಂಡೆಯಲ್ಲಿಯೇ ಹುಲ್ಲನ್ನು ಮೇಯುತ್ತಿದ್ದ ಎತ್ತುಗಳು ಬಾಯಾರಿಕೆಯಾಗಿ ನೀರು ಕುಡಿಯಲು ನದಿಗೆ ಇಳಿದಿವೆ. ಈ ಸಂದರ್ಭದಲ್ಲಿ ಒಂದರ ಹಗ್ಗ ಒಂದಕ್ಕೆ ತಗುಲಿ ಗಂಟು ಬಿದ್ದು ಕುತ್ತಿಗೆಗೆ ಬಿಗಿಯಾಗಿ ನೀರಲ್ಲಿ ಮುಳುಗಿವೆ.

ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದ ಎತ್ತುಗಳು

ಇದನ್ನು ಗಮನಿಸಿದ ರೈತ ಜೋರಾಗಿ ಚೀರಾಡಿ ಜನರನ್ನು ಕರೆಯುವಷ್ಟರಲ್ಲಿ ಕೊಚ್ಚಿಕೊಂಡು ಹೋದ ಎತ್ತುಗಳು ಉಸಿರುಗಟ್ಟಿ ಸಾವನ್ನಪ್ಪಿವೆ. ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಯ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಎತ್ತುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.

ನಂತರ ಕಾರ್ಯಾಚರಣೆ ಕೈಗೊಂಡ ಗ್ರಾಮಸ್ಥರು ನೀರಲ್ಲಿ ಮುಳುಗಿದ ಎತ್ತುಗಳನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಅಥಣಿ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Intro:ಕೃಷ್ಣಾ ನದಿಯಲ್ಲಿ ಎತ್ತುಗಳು ಕೊಚ್ಚಿಕೊಂಡು ಹೋಗಿ ಸಾವು
Body:
ಚಿಕ್ಕೋಡಿ :

ಕೃಷ್ಣಾ ನದಿ ದಂಡೆಗೆ ಎತ್ತುಗಳನ್ನು ಮೆಯಲು ಬಿಟ್ಟಾಗ ಎತ್ತುಗಳು ನೀರು ಕುಡಿಯಲು ಹೋಗಿ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋದ‌ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ನಡೆದಿದೆ.

ನಂದೇಶ್ವರ ಗ್ರಾಮದ ಗುಂಡುರಾವ ಯಲ್ಲಪ್ಪ ಲಾಲಸಿಂಗೆ ಎಂಬುವರಿಗೆ ಸೇರಿದ ಎತ್ತುಗಳು, ಸುಮಾರು 2 ಲಕ್ಷ ಬೆಲೆ ಬಾಳುವ ಎತ್ತುಗಳಿದ್ದು ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಎಂದಿನಂತೆ ರೈತ ಕೃಷ್ಣಾ ನದಿಯ ದಡದಲ್ಲಿರುವ ಮೇವಿನ ಗದ್ದೆಗೆ ಎತ್ತುಗಳನ್ನು ತೆಗೆದುಕೊಂಡು ಹೋಗಿ, ಮೇವು ಮಾಡಲು ಗುಂಡುರಾವ ಪ್ರಾರಂಭಿಸಿದ್ದಾನೆ. ನದಿ ದಂಡೆಯಲ್ಲಿಯೇ ಹುಲ್ಲನ್ನು ಮೇಯುತ್ತಿದ್ದ ಎತ್ತುಗಳು ಬಾಯಾರಿಕೆಯಾಗಿ ನೀರು ಕುಡಿಯಲು ನದಿಗೆ ಇಳಿದಿವೆ. ಈ ಸಂದರ್ಭದಲ್ಲಿ ಒಂದರ ಹಗ್ಗ ಒಂದಕ್ಕೆ ತಗೂಲಿ ಗಂಟು ಬಿದ್ದು ಕುತ್ತಿಗೆಗೆ ಬಿಗಿಯಾಗಿ ನೀರಲ್ಲಿ ಮುಳುಗಿವೆ. ಇದನ್ನು ಗಮನಸಿದ ರೈತ ಜೋರಾಗಿ ಚಿರಾಡಿ ಜನರನ್ನು ಕರೆಯುವುದರಲ್ಲಿ ಕೊಚ್ಚಿಕೊಂಡು ಹೋದ ಎತ್ತುಗಳು ಉಸಿರು ಗಟ್ಟಿ ನೀರು ಕುಡಿದಿವೆ.

ಮಹಾರಾಷ್ಟ್ರ ರಾಜ್ಯದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಯ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಒಳ ಹರಿವು ಹೆಚ್ಚಾದರಿಂದ ಸಾರ್ವಜನಿಕರಿಗೆ ಎತ್ತುಗಳನ್ನು ರಕ್ಷಣೆ ಮಾಡಲು ಆಗಿಲ್ಲ. ನಂತರ ಕಾರ್ಯಚರಣೆ ಕೈಗೊಂಡ ಗ್ರಾಮಸ್ಥರು ನೀರಲ್ಲಿ ಮುಳಿಗಿದ ಎತ್ತುಗಳನ್ನು ಮೇಲಕ್ಕೆ ಎತ್ತುವುದರೊಳಗೆ ಪ್ರಾಣ ಕಳೆದುಕೊಂಡಿವೆ.

ಸ್ಥಳಕ್ಕೆ ಅಥಣಿ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.