ETV Bharat / state

MES ಕಿಡಿಗೇಡಿಗಳ ಗಡಿಪಾರಿಗೆ ಸಿದ್ದರಾಮಯ್ಯ ಆಗ್ರಹ - ಬೆಳಗಾವಿ ಗಲಭೆ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

ಪದೇ ಪದೆ ಕ್ಯಾತೆ ತೆಗೆಯುತ್ತಿರುವ ಎಂಇಎಸ್​ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕೆಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

siddaramaiah insist for exile of MNS activists
ಎಂಇಎಸ್ ಕಿಡಿಗೇಡಿಗಳ ಗಡಿಪಾರಿಗೆ ಸಿದ್ದರಾಮಯ್ಯ ಆಗ್ರಹ
author img

By

Published : Dec 20, 2021, 9:01 PM IST

Updated : Dec 20, 2021, 10:11 PM IST

ಬೆಳಗಾವಿ: ಗಡಿಭಾಗದಲ್ಲಿ ಸದಾ ತಂಟೆ ತೆಗೆಯುತ್ತಿರುವ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಎಂಇಎಸ್ ಪುಂಡಾಟದ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ರಾಜ್ಯಕ್ಕಷ್ಟೇ ಸಿಮೀತರಲ್ಲ. ಇವರು ರಾಷ್ಟ್ರದ ಆಸ್ತಿ. ಈ ಸಂಗತಿಯನ್ನು ಎಂಇಎಸ್ ಪುಂಡರು ತಿಳಿದುಕೊಂಡಿಲ್ಲ. ಮಹಾಪುರುಷರಿಗೆ ತೋರುವ ಅಗೌರವ, ರಾಷ್ಟ್ರಕ್ಕೆ, ರಾಷ್ಟ್ರದ ಜನತೆಗೆ ತೋರಿದ ಅಗೌರವ.

ಎಂಇಎಸ್​ ಕಿಡಿಗೇಡಿಗಳ ಗಡಿಪಾರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಅವಿವೇಕಿಗಳಂತೆ ವರ್ತಿಸುವ ಎಂಇಎಸ್‍ನವರಿಗೆ ಇದು ಅರ್ಥವೇ ಆಗುತ್ತಿಲ್ಲ. ಹಲವು ವರ್ಷಗಳಿಂದ ಪುಂಡಾಟಿಕೆ ಪ್ರದರ್ಶಿಸುತ್ತಿರುವ ಎಂಇಎಸ್‍ನವರು ಬುದ್ಧಿಹೀನರಂತೆ ವರ್ತನೆ ಮಾಡುತ್ತಿದ್ದಾರೆ. ನಾವು ಉದಾಸೀನರು, ಸೌಮ್ಯ ಸ್ವಭಾವದವರು. ಆದರೆ, ಎಂಇಎಸ್ ಪುಂಡರು ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಮಹಾಪುರುಷರ ಪುತ್ಥಳಿಗಳಿಗೆ ಅವಮಾನಿಸುವ ಕೃತ್ಯ ನಡೆಯುತ್ತಿದೆ. ಸರ್ಕಾರ ಗುಪ್ತಚರ ಇಲಾಖೆಯೂ ವೈಫಲ್ಯವಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಪುಂಡರನ್ನು ಬಲಿ ಹಾಕಬೇಕು. ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಂತಹ ಕಿಡಿಗೇಡಿಗಳು ಈ ನಾಡಿನಲ್ಲಿ ಇರಲು ಯೋಗ್ಯರಿಲ್ಲ. ಇವರನ್ನು ಗಡಿಪಾರು ಮಾಡಲೇಬೇಕು. ಸಾಧ್ಯವಾದರೆ ಕ್ರಿಮಿನಲ್ ಕೇಸ್ ಕೂಡ ದಾಖಲಿಸಬೇಕು. ಈ ನೆಲದ ನೀರು, ಗಾಳಿ, ಆಹಾರ ಸೇವಿಸಿ ನಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆಯನ್ನು ಸದನದಲ್ಲಿರುವ 225 ಸದಸ್ಯರು ಪಕ್ಷಾತೀತವಾಗಿ ಖಂಡಿಸುತ್ತಾರೆ.

ರಾಜ್ಯ ಸರ್ಕಾರ ಕೂಡ ಖಂಡನಾ ನಿರ್ಣಯ ಮಂಡಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ರಾಜ್ಯ ಸರ್ಕಾರ ಕೂಡ ಪುಂಡರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಇನ್ನು ಮುಂದೆಯಾದರೂ ಗುಪ್ತಚರ ವಿಭಾಗವನ್ನು ಮತಷ್ಟು ಬಲಪಡಿಸಿಕೊಳ್ಳಬೇಕು.

ಎಂಇಎಸ್ ಪುಂಡರ ಕ್ರಮ ಖಂಡಿಸಿದ ಬಿಎಸ್‍ವೈ

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಅಲ್ಲಿನ ಸಿಎಂ ಜೊತೆಗೆ ಮಾತನಾಡಬೇಕು. ರಾಜ್ಯದಲ್ಲಿ ಎಂಇಎಸ್ ನಿಷೇಧಿಸುವ ಕುರಿತು ಕಾನೂನು ಸಲಹೆ ಪಡೆಯಬೇಕು. ಎಂಇಎಸ್ ಪುಂಡರಿಗೆ ಮಾನ - ಮರಿಯಾದೆ ಇಲ್ಲ. ಭಾಷೆ ಹೆಸರಲ್ಲಿ ಗಲಾಟೆಗೆ ಕಾರಣರಾಗುತ್ತಿರುವ ಎಂಇಎಸ್ ಪುಂಡರ ಕೃತ್ಯವನ್ನು ಯಾರೂ ಸಹಿಸಬಾರದು ಎಂದರು.

ಎಂಇಎಸ್ ಪುಂಡರ ಕ್ರಮ ಖಂಡಿಸಿದ ಬಿಎಸ್‍ವೈ:

ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಷ್ಟ್ರ, ರಾಜ್ಯದ ಬಗ್ಗೆ ಅಭಿಮಾನ ಸಹಜ. ಆದರೆ ಅಭಿಮಾನದ ಹೆಸರಲ್ಲಿ ಅವಮಾನಿಸುವ ಕೃತ್ಯ ಸರಿಯಲ್ಲ. ಈ ರೀತಿಯ ವರ್ತನೆ ಯಾರಿಗೂ ಶೋಭೆ ತರುವುದಿಲ್ಲ. ಕನ್ನಡ ಧ್ವಜ ಸುಟ್ಟವರ, ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಮಹಾನೀಯರನ್ನು ಅವಮಾನಿಸುವುದು ಯಾರಿಗೂ ಶೋಭೆ ತರುವುದಲ್ಲ. ಗಲಾಟೆಯ ವಿರುದ್ಧ ಷಡ್ಯಂತ್ರ ಇದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ದುಷ್ಟರ ವಿರುದ್ಧ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆ ಕಂಡ ಕೋವಿಡ್​ ಸೋಂಕಿತರ ಸಂಖ್ಯೆ: ಇಂದು 222 ಮಂದಿಗೆ ಪಾಸಿಟಿವ್, 2 ಸಾವು

Last Updated : Dec 20, 2021, 10:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.