ETV Bharat / state

ಹೊಟ್ಟೆ ನೋವೆಂದು ದಾಖಲಾದವನಿಗೆ ಆಪರೇಷನ್.. ಜೀವನ್ಮರಣದ ನಡುವೆ ರೋಗಿ ಹೋರಾಟ

ರೋಗಿಗೆ ಸರಿಯಾಗಿ ಪರೀಕ್ಷೆ ಮಾಡದೇ ಆಪರೇಷನ್ ಮಾಡಿರುವ ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಬಡ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ಆಸ್ಪತ್ರೆಯನ್ನು ತಕ್ಷಣವೇ ಬಂದ್ ಮಾಡಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

Operation for a person who is came as a stomach pain, now patient in Danger
ಹೊಟ್ಟೆ ನೋವೆಂದು ದಾಖಲಾದವನಿಗೆ ಆಪರೇಷನ್
author img

By

Published : Mar 1, 2021, 8:04 PM IST

Updated : Mar 1, 2021, 8:30 PM IST

ಬೆಳಗಾವಿ: ನಗರದ ಜೋಶಿ ನರ್ಸಿಂಗ್ ಹೋಮ್​ ವೈದ್ಯರ ಎಡವಟ್ಟಿನಿಂದಾಗಿ ಯುವಕನೋರ್ವ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಇಲ್ಲಿನ ಕಲಮೇಶ್ವರ ನಗರದ ಪರುಶರಾಮ ಮಲ್ಲಪ್ಪ ಲೋಕರೆ ಎಂಬಾತ ಕಳೆದ ಫೆ.21ರಂದು ಹೊಟ್ಟೆ ನೋವಿನಿಂದ ಮಾರುತಿ ಗಲ್ಲಿಯಲ್ಲಿರುವ ಜೋಶಿ ನರ್ಸಿಂಗ್ ಹೋಮ್​​ಗೆ ಚಿಕಿತ್ಸೆಗೆಂದು ದಾಖಲಾಗಿದ್ದ.

ಈ ವೇಳೆ ಅಲ್ಲಿನ ವೈದ್ಯರು ಸರಿಯಾಗಿ ಪರೀಕ್ಷೆ ನಡೆಸದೇ ಏಕಾಏಕಿ ಆಪರೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ ರೋಗಿಯ ಕುಟುಂಬಸ್ಥರ ಬಳಿ ಆಸ್ಪತ್ರೆಯವರು 25 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾರೆ. ಹಣ ತುಂಬಿಸಿಕೊಂಡ ಮಾರನೇ ದಿನವೇ ಆತನನ್ನು ಡಿಸ್ಚಾರ್ಜ್ ಮಾಡಿದ್ದಾರೆ.

ಇತ್ತ ರೋಗಿಯನ್ನು ಮನೆಗೆ ಕರೆದುಕೊಂಡ ಬಂದ ನಂತರ, ಆಪರೇಷನ್ ಆಗಿದ್ದ ಜಾಗದಲ್ಲಿ ಮಲ-ಮೂತ್ರ ಹೊರ ಬರಲು ಆರಂಭವಾಗಿದೆ. ತಕ್ಷಣವೇ ಕುಟುಂಬಸ್ಥರು ಜೋಶಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಈ ವೇಳೆ ಆಸ್ಪತ್ರೆ ವೈದ್ಯರು ಬೇರೆಯದ್ದೇ ಹೇಳಿದ್ದಾರೆ. ರೋಗಿಗೆ ಕ್ಯಾನ್ಸರ್ 4ನೇ ಸ್ಟೇಜ್​​ನಲ್ಲಿದೆ. ಹೀಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರಂತೆ.

ದಲಿತ ಸಂಘರ್ಷ ಸಮಿತಿ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ಆದರೆ ಜಿಲ್ಲಾಸ್ಪತ್ರೆಯಲ್ಲಿ ರೋಗಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಂಬಂಧಿಕರು ಹಾಗೂ ದಲಿತ ಸಂಘರ್ಷ ಸಮಿತಿ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜೋಶಿ ನರ್ಸಿಂಗ್ ಹೋಮ್ ಮುಂದೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ರೋಗಿಗೆ ಸರಿಯಾಗಿ ಪರೀಕ್ಷೆ ಮಾಡದೇ ಆಪರೇಷನ್ ಮಾಡಿರುವ ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಬಡ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ಆಸ್ಪತ್ರೆಯನ್ನು ತಕ್ಷಣವೇ ಬಂದ್ ಮಾಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಟಿಎಚ್‍ಒ ಡಾ. ಶಿವಾನಂದ ಮಾಸ್ತಮರಡಿ, ಡಾ. ರವಿ ಪಾಟೀಲ ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಮುಂಜಾಗ್ರತಾ ‌ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಮಗನನ್ನು ಕಳೆದುಕೊಂಡ ತಾಯಿಗೆ ಸಾಂತ್ವನ: ಧನಸಹಾಯ ನೀಡಿದ ಡಿಸಿಎಂ ಸವದಿ ಪುತ್ರ

Last Updated : Mar 1, 2021, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.