ETV Bharat / state

ಜಮೀನು ಮಾರಾಟ ಮಾಡಿ ಹಣದೊಂದಿಗೆ ಮಗ ಪರಾರಿ: ಪುತ್ರನ ಹುಡುಕಿ ಕೊಡುವಂತೆ ತಾಯಿ ಮನವಿ - ಪುತ್ರನನ್ನು ಹುಡಕಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ವೃದ್ಧೆ ಮನವಿ

ರಾಮದುರ್ಗ ತಾಲೂಕಿನ ಖಾನಪೇಟನಗರದ ಬಸವಣ್ಣೆವ್ವ ಕೋರಿಶೆಟ್ಟಿ ಎಂಬ ವೃದ್ಧೆ ಹಣ ಸಮೇತ ಪರಾರಿಯಾಗಿರುವ ತಮ್ಮ ಪುತ್ರನನ್ನು ಹುಡುಕಿಕೊಂಡುವಂತೆ ಪೊಲೀಸರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Old woman appealed for police to find my son at Belgaum
ಪುತ್ರನನ್ನು ಹುಡಕಿ ಕೊಡುವಂತೆ ಪೊಲೀಸ್​ ಮೂಲಕ ಜಿಲ್ಲಾಧಿಕಾರಿಗಳಿಗೆ ವೃದ್ಧೆ ಮನವಿ
author img

By

Published : Feb 21, 2022, 9:18 PM IST

ಬೆಳಗಾವಿ: ಸರ್ಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿ ಕೊಡುವಂತೆ ವೃದ್ಧೆಯೊಬ್ಬರು ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ರವಾನಿಸಿದರು. ರಾಮದುರ್ಗ ತಾಲೂಕಿನ ಖಾನಪೇಟನಗರದ ಬಸವಣ್ಣೆವ್ವ ಕೋರಿಶೆಟ್ಟಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ವೃದ್ಧೆ.

ಪುತ್ರನನ್ನು ಹುಡಕಿ ಕೊಡುವಂತೆ ಪೊಲೀಸ್​ ಮೂಲಕ ಜಿಲ್ಲಾಧಿಕಾರಿಗಳಿಗೆ ವೃದ್ಧೆ ಮನವಿ

ಕಳೆದ 18 ವರ್ಷಗಳ ಹಿಂದೆ ನನ್ನ ಹಿರಿಯ ಮಗ ಬಸಪ್ಪ ಕೋರಿಶೆಟ್ಟಿ ನನಗೆ 2 ಎಕರೆ ಜಮೀನು ನೀಡಿ, ಮೂರು ಮನೆಗಳ ಪೈಕಿ ಒಂದು ಮನೆಯನ್ನು ನಾನು ಬದುಕಿರುವರೆಗೆ ವಾಸಿಸಲು ಕೊಟ್ಟಿದ್ದನು. ಆದರೆ, ನನ್ನ ಕಿರಿಯ ಮಗ ಶಿಂಗಪ್ಪ ಕೋರಿಶೆಟ್ಟಿ ನನಗೆ ನೀಡಿದ ಜಮೀನನ್ನು ಮಾರಾಟ ಮಾಡಲು ಪ್ರಚೋದಿಸಿದ. ಹೀಗಾಗಿ ಆ ಜಮೀನನ್ನು 2 ಲಕ್ಷ 50 ಸಾವಿರ ರೂ.ಗಳಿಗೆ ನಾನು ಮಾರಾಟ ಮಾಡಿದ ನಂತರ ಬ್ಯಾಂಕ್​​ನಲ್ಲಿ ಸುರಕ್ಷಿತವಾಗಿ ನಿನ್ನ ಹೆಸರಿಲ್ಲಿ ಇಡುವುದಾಗಿ ಹೇಳಿ ನನಗೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಇತ್ತ ಇರುವ ಮನೆಯನ್ನು ಬೀಳಿಸಿ ಹೋಗಿದ್ದಾನೆ. ಇದರಿಂದ ನನಗೆ ವಾಸಿಸಲು ಸ್ಥಳವಿಲ್ಲ. ಮತ್ತೊಬ್ಬರ ಮನೆಯ ಕಟ್ಟೆಯ ಮೇಲೆ ಜೀವನ‌ ನಡೆಸುತ್ತಿದ್ದೇನೆ ಎಂದು ಮನವಿಯಲ್ಲಿ ದೂರಿದ್ದಾರೆ. ಆದರೆ ಕಳೆದ 15 ದಿನಗಳ ಹಿಂದೆ ರಾಮದುರ್ಗದಲ್ಲಿ ಅವನನ್ನು ನಾನು ನೋಡಿದ್ದೇನೆ. ಹತ್ತಾರು ಬಾರಿ ಬೆಂಗಳೂರಿಗೆ ಹೋಗಿ ಅವನನ್ನು ಹುಡಕಿದರೂ ಸಿಕ್ಕಿರಲಿಲ್ಲ.

ಸದ್ಯ ಆತ ಧಾರವಾಡದಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ‌. ನಾನು ನನ್ನ ಉಪಜೀವನಕ್ಕಾಗಿ ಇಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ನನಗೆ ವಯಸ್ಸಾದ ಕಾರಣ ನಾನು ಅಶಕ್ತಳಾಗಿದ್ದೇನೆ.ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಸರ್ಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಕ್ರಿಯೆ: ಈಶ್ವರಪ್ಪ, ಸಂಸದ ರಾಘವೇಂದ್ರ ಭಾಗಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.