ಅಥಣಿ (ಬೆಳಗಾವಿ): ಕೇವಲ ಎರಡು ದಿನದ ಗಂಡು ಶಿಶುವನ್ನು ಕೈ ಚೀಲದೊಳಗೆ ಹಾಕಿ ಬಯಲು ಪ್ರದೇಶದಲ್ಲಿ ಬಿಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ನಿಪ್ಪಾಣಿ ನಗರದ ಹೊರವಲಯ ಕೆ ಎಲ್ ಇ ಸಿ ಬಿ ಎಸ್ ಸಿ ಸ್ಕೂಲ್ ಬಳಿ ಶಿಶು ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ವಿಷಯ ತಿಳಿದ ಕೂಡಲೇ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನವಜಾತ ಶಿಶುವನ್ನು ರಕ್ಷಿಸಿ ನಿಪ್ಪಾಣಿ ಸಮುದಾಯದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಶಿಶುವ ಆರೋಗ್ಯವಾಗಿದೆ. ನವಜಾತ ಶಿಶುವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಲು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಈ ಸಂಬಂಧ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ :ಅಥಣಿಯಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ.. ನವಜಾತ ಮಗು ಪತ್ತೆ.. ಸಿಕ್ಕಿ ಬಿದ್ದ ಕಳ್ಳಿ