ETV Bharat / state

ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದೆ: ನಳೀನ್​ ಕುಮಾರ್ ಕಟೀಲ್​ ಟೀಕೆ - ಕಾಂಗ್ರೆಸ್ ಅತಂತ್ರ ಸ್ಥಿತಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬೆಳಗಾವಿಯಲ್ಲಿ ಪ್ರತಿಕ್ರಿಯೆ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಒಳಜಗಳ ಕಾಂಗ್ರೆಸ್​ನಲ್ಲಿ ಆತ್ಮವಿಶ್ವಾಸ ಕುಗ್ಗಿಸಿದೆ. ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ, ಸುದರ್ಶನ ಕಾಂಗ್ರೆಸ್ ಬಿಡಲು ತಯಾರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​

author img

By

Published : Jun 7, 2022, 3:37 PM IST

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಇದೆ. ಕೇಂದ್ರದ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟವಾಗಿ‌ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಚಿಂತನಾ ಶಿಬಿರ ಪ್ರಾರಂಭವಾದ ಬಳಿಕ 60 ಜನ ಕಾಂಗ್ರೆಸ್ ಬಿಟ್ಟಿದ್ದಾರೆ. ರಾಜ್ಯದಲ್ಲೂ ಇದೇ ರೀತಿಯ ಪರಿಣಾಮ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ಅವರು ಮಾತನಾಡಿದರು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯ ಮೂರು, ರಾಜ್ಯದ ನಾಲ್ಕು ಪರಿಷತ್ ಚುನಾವಣೆ ಬಿಜೆಪಿ ಗೆಲುವು ನಿಶ್ಚಿತ.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಶಿಕ್ಷಕರಲ್ಲಿ ನಂಬಿಕೆ ಹುಟ್ಟಿದೆ. ಶಿಕ್ಷಣದ ಮೂಲಕ ಪರಿವರ್ತನೆ ಆಗುವ ಭರವಸೆ ಇದೆ. ಏಳನೇ ವೇತನ ಆಯೋಗದ ಅನುಷ್ಠಾನದ ಭರವಸೆ ಇದೆ. ಕಳೆದ ಸಲ ಗೆದ್ದಿರುವ ಪರಿಷತ್ ಸದಸ್ಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.

ಹೈಕಮಾಂಡ್ ,ಕೆಪಿಸಿಸಿಯ ನಡುವೆ ಹೊಂದಾಣಿಕೆ ಇಲ್ಲ.. ಸಿದ್ದರಾಮಯ್ಯ, ಡಿಕೆಶಿ ನಡುವಿನ ಒಳಜಗಳ ಕಾಂಗ್ರೆಸ್​ನಲ್ಲಿ ಆತ್ಮವಿಶ್ವಾಸ ಕುಗ್ಗಿಸಿದೆ. ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ, ಸುದರ್ಶನ ಕಾಂಗ್ರೆಸ್ ಬಿಡಲು ತಯಾರಾಗಿದ್ದಾರೆ. ಕಾಂಗ್ರೆಸ್​ನಲ್ಲಿ ತಮ್ಮ ಹಿಡಿತ ಹೆಚ್ಚು ಮಾಡಲು ಸಿದ್ದರಾಮಯ್ಯ ದಿನಕ್ಕೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿಯ ನಡುವೆ ಹೊಂದಾಣಿಕೆ ಇಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಹೊಂದಾಣಿಕೆ ಆಗಲೇ ಇಲ್ಲ ಎಂದು ಕಟೀಲ್​ ಕುಟುಕಿದರು.

ಖರ್ಗೆ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಸಿದ್ದರಾಮಯ್ಯ ಅದಕ್ಕೆ ವಿರುದ್ಧವಾಗಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿಎಂ ಆಗೋ ವಿಚಾರ ಕಾಂಗ್ರೆಸ್​ನಲ್ಲಿ ಗೊಂದಲ ಸೃಷ್ಟಿಯಾಗಿದೆ. ಡಿಕೆಶಿ, ಸಿದ್ದರಾಮಯ್ಯ ನಡುವೆ ಫೈಟ್ ಶುರುವಾಗಿದೆ. ಒಳಜಗಳ ಇತ್ಯರ್ಥಕ್ಕೆ ಚಿಂತನ ಶಿಬಿರ ಮಾಡಿದ್ರು. ಚಿಂತನ ಶಿಬಿರ ವಿಚಿತ್ರ ಶಿಬಿರವಾಯಿತು. ಅಂದೇ ರಾಜ್ಯಸಭೆ ಚುನಾವಣೆ ಗಲಾಟೆ ನಡೆಯಿತು‌. ಸರ್ಕಾರ ಮಾಡೋದು ಬಿಡಿ ಪಕ್ಷದ ಪೂರ್ಣ ತಂಡ ರಚನೆ ಮಾಡಲು ಆಗಿಲ್ಲ ಎಂದರು.

ತಿರಸ್ಕಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ‌.. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎರಡು ವರ್ಷದಿಂದ ಪಕ್ಷದ ಪಧಾದಿಕಾರಿಗಳ ನೇಮಕ ಆಗಿಲ್ಲ. ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಇದರ ಪರಿಣಾಮ ಸಮಾಜದ ಮೇಲೆ ಬೀರಲು ಯತ್ನ ನಡೆಸಿದೆ. ದಿನಕ್ಕೆ ಒಂದು ಹೇಳಿಕೆ ಕೊಟ್ಟು ಅರಾಜಕತೆ ಸೃಷ್ಟಿ ಮಾಡಲು ಪ್ರಯತ್ನ ‌ಮಾಡುತ್ತಿದೆ. ಗಲಭೆ ಸೃಷ್ಟಿಯಾದಾಗ ಪ್ರೇರಣೆ ಕೊಡುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ತಿರಸ್ಕಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ‌ ಎಂದರು.

ಸಿದ್ದರಾಮಯ್ಯ ಸಹ ಕೈ ಸುಟ್ಟುಕೊಳ್ಳಲಿದ್ದಾರೆ.. ಆರ್​ಎಸ್​ಎಸ್​ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುವ ಕೆಲಸ ಮಾಡಿದೆ. ಸಂಘದ ಕಾರ್ಯಕರ್ತರು ಕೇವಲ ಬಿಜೆಪಿಯಲ್ಲಿ‌ ಇಲ್ಲ. ಕಾಂಗ್ರೆಸ್​ನಲ್ಲಿ ಉಗ್ರಪ್ಪ, ಜೆಡಿಎಸ್​ನಲ್ಲಿ ಪಿಜಿಆರ್. ಸಿಂದ್ಯಾಗೆ ಸಂಘದ ಹಿನ್ನೆಲೆ ಇದೆ. ಸಂಘ ವ್ಯಕ್ತಿಗಳ ನಿರ್ಮಾಣ ಮಾಡಿ ರಾಷ್ಟ್ರೀಯ ಕಾರ್ಯ ಮಾಡಿ ಎಂದು ಹೇಳುತ್ತದೆ.

ಸಂಘವನ್ನು ರಾಜಕಾರಣಕ್ಕೆ ಎಳೆದು ತರುವುದು ಸರಿಯಲ್ಲ. ಪಕ್ಷದಲ್ಲಿ ಹಿಡಿತ‌ ಸಾಧಿಸಲು ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತ ತುಷ್ಟಿಕರಣ ನೀತಿ ಮಾಡಲು ಕಾಂಗ್ರೆಸ್, ‌ಜೆಡಿಎಸ್ ಪೈಪೋಟಿ ನಡೆಸುತ್ತಿದೆ. ನೆಹರು, ಇಂದಿಗಾ ಗಾಂಧಿ ಸಂಘ ನಾಶ ಮಾಡಲು ಪ್ರಯತ್ನ ಮಾಡಿದರು. ಈ ಸಿದ್ದರಾಮಯ್ಯ ಸಹ ಕೈ ಸುಟ್ಟುಕೊಳ್ಳಲಿದ್ದಾರೆ ಎಂದು ಹೇಳಿದರು.

ಸಿದ್ಧಾಂತ ಒಪ್ಪದಿದ್ದವರು ವಾಪಸ್ ಹೋಗುತ್ತಾರೆ.. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಆರೋಪ ವಿಚಾರಕ್ಕೆ ನಮ್ಮ ಪಕ್ಷಕ್ಕೂ ಬೇರೆ ಬೇರೆ ಪಕ್ಷಗಳಿಂದ ನಾಯಕರು ಬಂದಿದ್ದಾರೆ. ಚೆನ್ನಾಗಿ ನಾಯಕರಾಗಿದ್ದಾರೆ. ಮಂತ್ರಿ, ಮುಖ್ಯಮಂತ್ರಿಯಾಗಿದ್ದಾರೆ. ಪಾರ್ಟಿಯ ದೊಡ್ಡ ದೊಡ್ಡ ಜವಾಬ್ದಾರಿಯನ್ನು ಪಡೆದಿದ್ದಾರೆ. ಒಮ್ಮೆ ಇಲ್ಲಿ ಸಿದ್ದಾಂತ ಒಪ್ಪಿಕೊಂಡು ಬಂದವರು ಇಲ್ಲೇ ಇರುತ್ತಾರೆ‌. ಸಿದ್ಧಾಂತ ಒಪ್ಪದಿದ್ದವರು ವಾಪಸ್ ಹೋಗುತ್ತಾರೆ ಎಂದರು.

ಓದಿ: ಚಡ್ಡಿಯೊಳಗೆ ಏನೂ ಇಲ್ಲ, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಕುದುರಿದೆಯಷ್ಟೇ: ಕುಮಾರಸ್ವಾಮಿ ವ್ಯಂಗ್ಯ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.