ETV Bharat / state

ಮುಸ್ಲಿಮರಿಂದ ಸೋಂಕಿನಿಂದ ಮೃತರಾದ ಹಿಂದೂಗಳ ಅಂತ್ಯಕ್ರಿಯೆ..

ಸೋಂಕಿನಿoದ ಸಾವನ್ನಪ್ಪಿದವರ ಮೃತದೇಹಗಳನ್ನು ಸಾಗಿಸಲು ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ನಮ್ಮ ಒಂದು ತಂಡದ ಸದಸ್ಯರಿಗೆ ಆರೋಗ್ಯ ಸರಿಯಲ್ಲಿದ್ದರೆ, ಇನ್ನೊಂದು ತಂಡ ಕಾರ್ಯನಿರ್ವಹಿಸಲು ಸಿದ್ದವಿದೆ..

author img

By

Published : May 12, 2021, 1:56 PM IST

Belgaum
ಕೊರೊನಾದಿಂದ ಮೃತರಾದ ಹಿಂದೂಗಳ ಅಂತ್ಯಕ್ರಿಯೆ ನೆರವೇರಿಸುತ್ತಿರುವ ಮುಸ್ಲಿಂ ಬಾಂಧವರು

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಖಿದಮತ ಸೋಷಿಯಲ್ ವೆಲ್ಫೇರ್ ಕಮಿಟಿ ಸದಸ್ಯರು ಕೊರೊನಾದಿಂದ ಮೃತರಾದ ಹಿಂದೂಗಳ ಅಂತ್ಯಕ್ರಿಯೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

2017ರಲ್ಲಿ ಆರಂಭವಾದ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಖಿದಮತ ಸೋಷಿಯಲ್ ವೆಲ್ಫೇರ್ ಕಮಿಟಿ, ಬಡವರಿಗೆ ಉಚಿತ ವೈದಕೀಯ ಚಿಕಿತ್ಸೆ, ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಸೇರಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಈ ಮುಸ್ಲಿಂ ಕಮಿಟಿ ಸದಸ್ಯರು, ಮೂಡಲಗಿ ತಾಲೂಕಿನ ಜನತೆ ಯಾವುದೇ ಸಮಯದಲ್ಲಿ ಕರೆ ಮಾಡಿದರೂ ನೆರವಿಗೆ ಬರುತ್ತಾರೆ‌. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊವೀಡ್ ಸೋಂಕಿನಿಂದ ಸಾವು-ನೋವುಗಳು ಹೆಚ್ಚಾಗುತ್ತಿವೆ.

ಸೋಂಕಿನಿoದ ಸಾವನ್ನಪ್ಪಿದವರ ಮೃತದೇಹಗಳನ್ನು ಸಾಗಿಸಲು ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ನಮ್ಮ ಒಂದು ತಂಡದ ಸದಸ್ಯರಿಗೆ ಆರೋಗ್ಯ ಸರಿಯಲ್ಲಿದ್ದರೆ, ಇನ್ನೊಂದು ತಂಡ ಕಾರ್ಯನಿರ್ವಹಿಸಲು ಸಿದ್ದವಿದೆ.

ಯಾವುದೇ ಕಾರಣಕ್ಕೂ ನಮ್ಮ ಸೇವೆ ಸ್ಥಗಿತಗೊಳಿಸುವುದಿಲ್ಲ. ಈವರೆಗೂ 60ಕ್ಕೂ ಹೆಚ್ಚು ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ದೂರವಾಣಿ ಮೂಲಕ ಈಟಿವಿ ಭಾರತಗೆ ಕಮಿಟಿ‌ ಅಧ್ಯಕ್ಷ ಮಾಲೀಕ‌ ಹುಣಸ್ಯಾಳ ತಿಳಿಸಿದರು.

ಜೊತೆಗೆ ಯಾವುದೇ ರೀತಿಯ ಸಹಾಯಕ್ಕಾಗಿ 9481280786, 9448863320 ಕರೆ ಮಾಡಿ ಎಂದು ತಿಳಿಸಿದ್ದಾರೆ.

ಓದಿ: ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದವನಿಗೆ ಬಿತ್ತು ಭಾರೀ ದಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.