ETV Bharat / state

ಆರ್.ಎಸ್.ಎಸ್‌, ಹೆಡಗೇವಾರ್ ಇತಿಹಾಸ ಒಮ್ಮೆ ಓದಿದ್ರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರ್ತಾರೆ : ಮುರುಗೇಶ್ ನಿರಾಣಿ - murugesh nirani statement against siddaramaiah

ಆರ್.ಎಸ್.ಎಸ್ ಬಗ್ಗೆ ಆಳವಾಗಿ ಅರಿತುಕೊಂಡರೆ ಅವರ ಮನಃ ಪರಿವರ್ತನೆ ಆಗುತ್ತದೆ. ಸಿದ್ದರಾಮಯ್ಯ ಅವರು ಹೆಡಗೇವಾರ್ ಬಗ್ಗೆಯೂ ಮಾತನಾಡಿದ್ದಾರೆ. ಹೆಡಗೇವಾರ್ ಇತಿಹಾಸ ಒಮ್ಮೆ ಓದಿದ್ರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರ್ತಾರೆ. ನಾನು ಸಿದ್ದರಾಮಯ್ಯನವರ ಅನುಭವವನ್ನು ಪ್ರಶ್ನೆ ಮಾಡಲ್ಲ, ಅವರು ಈ ಬಗ್ಗೆ ಓದಬೇಕು ಎಂದು ಮನವಿ ಮಾಡ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

murugesh-nirani-statement-against-siddaramaiah
ಆರ್.ಎಸ್.ಎಸ್‌, ಹೆಡಗೇವಾರ್ ಇತಿಹಾಸ ಒಮ್ಮೆ ಓದಿದ್ರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರ್ತಾರೆ : ಮುರುಗೇಶ್ ನಿರಾಣಿ
author img

By

Published : Jun 7, 2022, 3:56 PM IST

ಬೆಳಗಾವಿ : ಆರ್.ಎಸ್.ಎಸ್‌ ಸಂಘಟನೆ ಮತ್ತು ಹೆಡಗೇವಾರ್ ಇತಿಹಾಸವನ್ನು ಒಮ್ಮೆ ಓದಿದ್ರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರ್ತಾರೆ ಎಂದು‌ ಮಾಜಿ‌ ಸಿಎಂ ಸಿದ್ದರಾಮಯ್ಯಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಆರ್.ಎಸ್.ಎಸ್ ಬಗ್ಗೆ ಮಾತನಾಡೋದು ಸೂಕ್ತವಲ್ಲ. ಅವರಿಗೆ ಅಪಾರವಾದ ಅನುಭವ ಇದೆ. ನಮ್ಮ ರಾಜ್ಯದ ಅಭಿವೃದ್ಧಿಯಲ್ಲಿ ಅವರದ್ದು ಅಳಿಲು ಸೇವೆ ಇದೆ. ನಾವು ಈ ಬಗ್ಗೆ ಅವರನ್ನು ನಿರಾಕರಣೆ ಮಾಡಲ್ಲ. ಅವರಿಗೂ ಮಾಡಲು ಸಾಕಷ್ಟು ಕೆಲಸ ಇದೆ. ಅದರ ಕಡೆ ಗಮನ ಕೊಡಬೇಕು ಎಂದು ಹೇಳಿದರು.

ಆರ್‌ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಆರ್‌ಎಸ್ಎಸ್ ಬಗ್ಗೆ ಋಣಾತ್ಮಕವಾಗಿ ಮಾತನಾಡುತ್ತಿದ್ದಾರೆ. ಆರ್.ಎಸ್.ಎಸ್ ಬಗ್ಗೆ ಆಳವಾಗಿ ಅರಿತುಕೊಂಡರೆ ಅವರ ಮನಃ ಪರಿವರ್ತನೆ ಆಗುತ್ತದೆ. ಸಿದ್ದರಾಮಯ್ಯ ಅವರು ಹೆಡಗೇವಾರ್ ಬಗ್ಗೆಯೂ ಮಾತನಾಡಿದ್ದಾರೆ. ಹೆಡಗೇವಾರ್ ಇತಿಹಾಸವನ್ನು ಒಮ್ಮೆ ಓದಿದ್ರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರ್ತಾರೆ. ಆದರೆ ಹೆಡಗೇವಾರ್ ಬಗ್ಗೆ ಅವರು ಓದಿಲ್ಲ. ಸಿದ್ದರಾಮಯ್ಯ ಅವರಿಗೆ ಸಮಾಜದ ಬಗ್ಗೆ, ನಮ್ಮ ರಾಜ್ಯ ಅಭಿವೃದ್ಧಿ ಪಡಿಸಿದ ಬಗ್ಗೆ ಜ್ಞಾನವಿದೆ. ಅವರ ವಯಸ್ಸಿನ, ಅವರ ಅನುಭವವನ್ನು ನಾನು ಪ್ರಶ್ನೆ ಮಾಡಲ್ಲ. ಅವರು ಈ ಬಗ್ಗೆ ಓದಿಲ್ಲ, ಓದಬೇಕು ಎಂದು ವಿನಂತಿ ಮಾಡ್ತೇನೆ ಎಂದು ಹೇಳಿದರು.

ಆರ್‌ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ : ಆರ್‌ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ. ಆರ್‌ಎಸ್ಎಸ್ ನವರು ನಿಸ್ವಾರ್ಥದಿಂದ ಸೇವೆ ಮಾಡುವಂತವರು. ನಾನು ಮುಂದೆ ಎಂಪಿ, ಎಂಎಲ್‌ಎ, ಸಿಎಂ, ಪ್ರಧಾನಿ ಆಗಬೇಕೆಂದು ಕನಸು ಕಂಡವನಲ್ಲ. ಎಲ್ಲಿ ಅನ್ಯಾಯ ನಡೆಯುತ್ತೋ, ಎಲ್ಲಿ ಸಾರ್ವಜನಿಕರು ಕಷ್ಟದಲ್ಲಿರ್ತಾರೆ ಅಲ್ಲಿ ಗಟ್ಟಿಯಾಗಿ ನಿಂತು ಕೆಲಸ ಮಾಡುವವನು. ಹಿಂದೆ ಮಹಾರಾಷ್ಟ್ರದಲ್ಲಿ ಭೂಕಂಪ ಆದಾಗ RSS ಹಿರಿಯರು ಕೆಲಸ ಮಾಡಿದ್ದು ನೋಡಿದ್ರೆ ಮೈ ಜುಮ್ಮೆನ್ನುತ್ತದೆ. ತಾವೇ ಸ್ವಇಚ್ಛೆಯಿಂದ ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗಿ ಕೆಲಸ ಮಾಡಿದ್ದರು. 2008ರಲ್ಲಿ ಪ್ರವಾಹ ಬಂದಾಗ ಜನ ಜಾನುವಾರುಗಳ ರಕ್ಷಣೆಗೆ ಮನೆಮಠ ಬಿಟ್ಟು ಕೆಲಸ ಮಾಡಿದವರು ಆರ್ ಎಸ್ ಎಸ್ ಕಾರ್ಯಕರ್ತರು ಎಂದು ನಿರಾಣಿ ತಿಳಿಸಿದರು.

ಬಿಜೆಪಿಯವರೆಲ್ಲಾ RSS ಕೈಗೊಂಬೆಗಳು ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಿರಾಣಿ, ನಮ್ಮ ಕುಟುಂಬದಲ್ಲಿ ನಾವು ನಮ್ಮ ತಂದೆ-ತಾಯಿ ಮಾತು ಕೇಳುತ್ತೇವೆ. ನಮ್ಮ ತಂದೆ-ತಾಯಿ ಮಾತು ಕೇಳೋದು ಎಂದರೆ ಕೈಗೊಂಬೆ ಎಂದು ಅರ್ಥ ಅಲ್ಲ. RSSನ್ನು ನಮ್ಮ ತಂದೆ-ತಾಯಿ ಸ್ಥಾನದಲ್ಲಿ ನೋಡುತ್ತೇವೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೇವೆ. ಇದು ಕೈಗೊಂಬೆ ಅಂತಾ ಅಲ್ಲ. ಅದು ನಮ್ಮ ಕರ್ತವ್ಯ. ಅವರ ಅನುಭವದಿಂದ‌ ನಮಗೆ ಮಾರ್ಗದರ್ಶನ ಮಾಡಿದಾಗ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನ ಮಾಡೋದು ನಮ್ಮ ಕರ್ತವ್ಯ. ಅವರನ್ನು ಆ ಪೂಜ್ಯ ಸ್ಥಾನದಲ್ಲಿ ನೋಡುತ್ತೇವೆ. ಚಡ್ಡಿ ಬಗ್ಗೆ ಆರ್‌ಎಸ್ಎಸ್ ಬಗ್ಗೆ ಹೆಡಗೇವಾರ್ ಬಗ್ಗೆ ಓದಿ ತಿಳಿದುಕೊಂಡು ಆಮೇಲೆ ಮಾತನಾಡಲಿ ಎಂದ ಸಚಿವ ಮುರುಗೇಶ್ ನಿರಾಣಿ ಸಲಹೆ ನೀಡಿದರು.

ಓದಿ : ಸಿದ್ದರಾಮಯ್ಯ ಪುಂಡ, ಪೋಕರಿಗಳ ರೀತಿ ಮಾತನಾಡುತ್ತಾರೆ : ಜಗದೀಶ್ ಶೆಟ್ಟರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.