ಬೆಳಗಾವಿ: ರಾಜ್ಯದಲ್ಲಿರುವ ಎಲ್ಲ ಜಾತಿ, ಸಮುದಾಯಗಳ ಏಳಿಗೆ ಬಿಜೆಪಿ ಸರ್ಕಾರದ ಆದ್ಯ ಕರ್ತವ್ಯ. ಆ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ಮರಾಠ ಪ್ರಾಧಿಕಾರ ರಚನೆ ಮಾಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆರು ಕೋಟಿ ಕನ್ನಡಿಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಸಿಎಂ ಮರಾಠ ಪ್ರಾಧಿಕಾರ ರಚನೆ ಮಾಡಿದ್ದಾರೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
'ಯಾರನ್ನಾದರೂ ವಿರೋಧಿ ಕನ್ನಡ ಬೆಳೆಸಬೇಕಿಲ್ಲ'
ಬಂದ್ ಕರೆಯುವಂತಹದ್ದು ಸರಿಯಲ್ಲ. ಬಂದ್ ಕಲ್ಚರ್ ಬಂದ್ ಆಗಬೇಕು. ಬಂದ್ ಮಾಡುವುದನ್ನ ಈಗಾಗಲೇ ನಿಲ್ಲಿಸಿದ್ದಾರೆ. ಇಂದಿನ ಬಂದ್ ಯಾವುದೇ ಫಲ ಆಗುವುದಿಲ್ಲ. ಯಾರನ್ನಾದರು ವಿರೋಧಿಸಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಅವರು ಕನ್ನಡಪರ ಹೋರಾಟಗಾರರಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.
ಓದಿ: Live Updates: ಕರ್ನಾಟಕ ಬಂದ್‌ಗೆ ಸಿಎಂ ತವರು ಜಿಲ್ಲೆಯಲ್ಲಿ ಸಿಗದ ಬೆಂ'ಬಲ'!
ಸರ್ಕಾರದ ಜತೆಗೆ ಕುಳಿತು ಚರ್ಚೆ ಮಾಡುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿದ ಅವರು, ಸರ್ಕಾರ ಮತ್ತು ಯಡಿಯೂರಪ್ಪನವರು ಕನ್ನಡಪರ ಹೋರಾಟಗಾರರ ಮಾತುಗಳನ್ನು ಕೇಳಲು ತಯಾರಿದ್ದಾರೆ. ಕನ್ನಡದ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದು ತೇಜಸ್ವಿ ಸೂರ್ಯ ತಿಳಿಸಿದರು.