ETV Bharat / state

ಚಿಕ್ಕೋಡಿ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - ಚಿಕ್ಕೋಡಿ

ಚಿಕ್ಕೋಡಿಯಲ್ಲಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

-suicide
ಆತ್ಮಹತ್ಯೆ
author img

By ETV Bharat Karnataka Team

Published : Jan 18, 2024, 6:36 AM IST

ಚಿಕ್ಕೋಡಿ(ಬೆಳಗಾವಿ): ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಬುಧವಾರ ನಡೆದಿದೆ. ಸರಸ್ವತಿ ಕಿರವೆ (26), ಮಕ್ಕಳಾದ ದೀಪಿಕಾ (7), ರೀತಿಕಾ (4) ಮೃತರು. ಹಾರುಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ ಕಿರಣ ಎಂಬವರ ಜೊತೆ 2016ರಲ್ಲಿ ಸರಸ್ವತಿ ವಿವಾಹವಾಗಿದ್ದರು. ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದರು. ಇದೀಗ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಕಿರಣ ಮದ್ಯವ್ಯಸನಿಯಾಗಿದ್ದು ಎಂಟು ತಿಂಗಳ ಹಿಂದೆ ಸರಸ್ವತಿ ತವರು ಮನೆಗೆ ಬಂದಿದ್ದರು. ಬುಧವಾರ ಮುಂಜಾನೆ ಇವರು ಮನೆಯಿಂದ ಕಾಣೆಯಾಗಿದ್ದರು. ಕುಟುಂಬಸ್ಥರು ಆತಂಕಗೊಂಡು ತೋಟ, ಬಾವಿಯಲ್ಲಿ ಹುಡುಕಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಾರುಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಮಧ್ಯರಾತ್ರಿ ಬಸ್​ ಅಡ್ಡಹಾಕಿ ಕಿಡಿಗೇಡಿಗಳ ಅಟ್ಟಹಾಸ: ಕೆಎಸ್ಆರ್​ಟಿಸಿ ಬಸ್‌ಗಳ ಗಾಜು ಪುಡಿಪುಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.