ETV Bharat / state

ಬಿಟ್ಟೋಗಬೇಡ ಅಮ್ಮ.. ತಾಯಿ ಕಳೇಬರ ತಬ್ಬಿಕೊಂಡು ಮರಿಕೋತಿಯ ಮೂಕ ರೋಧನೆ - monkey died by electric shock

ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ತಾಯಿಯನ್ನು ಕಂಡು ಮರಿ ಮಂಗವೊಂದು ಉಮ್ಮಳಿಸಿ ದುಃಖಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಮನಕಲಕುವಂತಿದೆ..

Monkey died by electrical shock
ಮಂಗ ಸಾವು
author img

By

Published : Oct 12, 2020, 10:50 AM IST

ಬೆಳಗಾವಿ: ಮನುಷ್ಯರಲ್ಲಾಗಲಿ, ಪ್ರಾಣಿಗಳಲ್ಲೇ ಆಗಿರಲಿ ತಾಯಿ ಸ್ಥಾನ ಮಕ್ಕಳು-ಮರಿಗೆ ಅದು ದೊಡ್ಡದೇ.. ಪ್ರಾಣಿಗಳಲ್ಲಿ ತಾಯಿ-ಮರಿಯ ಸಂಬಂಧ ಎಂಥಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ ಇಲ್ಲೊಂದು ಘಟನೆ.

ಹೌದು, ವಿದ್ಯುತ್​ ಸ್ಪರ್ಶಿಸಿ ಮಂಗವೊಂದು ಮೃತಪಟ್ಟಿದ್ದು, ಅದರ ಮರಿಯ ಮೌನ ರೋಧನ, ಅಮ್ಮನನ್ನು ಎಬ್ಬಿಸಲು ಚಡಪಡಿಸುತ್ತಿರುವ ಪರಿ ಕಲ್ಲು ಹೃದಯದವರಲ್ಲೂ ಕಣ್ಣೀರು ತರಿಸುವಂತಿತ್ತು. ಈ ಮನಕಲಕುವ ಘಟನೆ ಕಂಡುಬಂದಿದ್ದು ಗೋಕಾಕ್​ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ.

ಚಿರನಿದ್ರೆಗೆ ಜಾರಿದ ಅಮ್ಮನ ಕಂಡು ಮರಿ ಕೋತಿಯ ಮೌನ ರೋಧನ..

ತಾಯಿಯನ್ನು ಕಳೆದುಕೊಂಡು ರೋದಿಸುತ್ತಿರುವ ಮರಿ ಕೋತಿಯ ರೋಧನೆಯ ದೃಶ್ಯ ಮಮ್ಮಲ ಮರಗುವಂತಿತ್ತು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಹಾರಕ್ಕಾಗಿ ಅರಸಿ ಹೋಗುವ ದಾರಿಯಲ್ಲಿ ವಿದ್ಯುತ್ ಶಾಕ್​ ತಗುಲಿ ತಾಯಿ ಮಂಗ ಸಾವನ್ನಪ್ಪಿತ್ತು. ಸ್ಥಳೀಯರೇ ಮೃತ ಮಂಗದ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ತಾಯಿಯ ಕಳೇಬರಹದ ಮೇಲೆ ಮರಿಮಂಗ ಬಿದ್ದು ಗೋಳಾಡಿತು. ಈ ಗೋಳಾಟ ನೋಡಿ ಕೊಣ್ಣೂರು ಗ್ರಾಮದ ಜನರು ಕಣ್ಣೀರು ಹಾಕಿದರು. ಗೋರಿಯ ಒಳಗೂ ಸಹ ಹೋಗಿ ಅಮ್ಮನಿಗಾಗಿ ಮರಿಮಂಗ ಪರಿತಪಿಸಿತು. ಇದೀಗ ತಾಯಿ ಹಾಗೂ ಮರಿ ಮಂಗನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮದ ಪವನ್ ರಜಪೂತ್ ಎಂಬುವರು ಸದ್ಯ ಮರಿ ಮಂಗವನ್ನು ಮನೆಗೆ ತಂದು ಸಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.