ಚಿಕ್ಕೋಡಿ, ಬೆಳಗಾವಿ: ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಪಾರ್ಟ್ ಟೈಮ್ ಪ್ಲೇಯರ್ ಅಲ್ಲ. ಫುಲ್ ಟೈಮ್ ಪ್ಲೇಯರ್. ಯಾವತ್ತೂ ಅವರನ್ನು ಮತದಾರರು ಕೈಬಿಟ್ಟಿಲ್ಲ ಎಂದು ಎಂಎಲ್‌ಸಿ ಚನ್ನರಾಜು ಹಟ್ಟಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಚುನಾವಣೆ ತಯಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಂಎಲ್‌ಸಿ ಚನ್ನರಾಜು ಹಟ್ಟಿಹೊಳಿ, ನಮ್ಮ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಹೋರಾಟದಿಂದ ರಾಜಕೀಯಕ್ಕೆ ಬಂದವರು. ನಿತ್ಯ ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕೆಲಸಗಾರರು. ರಾಜಕೀಯದಲ್ಲಿ ಪಾರ್ಟ್ ಟೈಮ್ ಪ್ಲೇಯರ್ಸ್ ಇರ್ತಾರೆ. ಫುಲ್ ಟೈಮ್ ಪ್ಲೇಯರ್ಸ್ ಸಹ ಇರ್ತಾರೆ ಎಂದರು.
ಆದರೆ ನಮ್ಮ ಅಕ್ಕ ಫುಲ್ ಟೈಮ್ ಪ್ಲೇಯರ್. ದಿನವೂ ಜನರಿಗೆ ಸಿಗ್ತಾರೆ, ಭೇಟಿಯಾಗ್ತಾರೆ, ಕೆಲಸ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅಂತಾ ಅಷ್ಟೇ ಅಲ್ಲ.. ರಾಜ್ಯದಲ್ಲಿ ಕೆಲಸಗಾರರಿಗೆ ಯಾವತ್ತೂ ಸೋಲಿಲ್ಲ. ಅವರ ಜೊತೆ ಜನ ಯಾವತ್ತೂ ಇರ್ತಾರೆ. ಈಗ ಪಾರ್ಟ್ ಟೈಮ್ ಪ್ಲೇಯರ್ಸ್‌ದ್ದೇ ಪ್ರಾಬ್ಲಮ್ ಎಂದು ಹೇಳಿದರು.
ಗ್ರಾಮೀಣ ಕ್ಷೇತ್ರಕ್ಕೆ ಪಾರ್ಟ್ ಟೈಮ್ ಪ್ಲೇಯರ್ಸ್ ಬಂದು ಹೋಗೋದು ಎಫೆಕ್ಟ್ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾವು ಈ ಸಂದರ್ಭದಲ್ಲಿ ಏನೂ ಹೇಳಲ್ಲ. ಒಂದು ಪಕ್ಷದ ಕೆಲಸ ಮಾಡೋದು ಬೇರೆ. ನಮ್ಮ ಪಕ್ಷದ ಕೆಲಸ ನಾವು ಮಾಡ್ತಿದ್ದೇವೆ. ಅವರು ಅವರ ಪಕ್ಷದ ಕೆಲಸ ಮಾಡ್ತಿದ್ದಾರೆ. ಅದಕ್ಕೆ ಅವರ ಪಕ್ಷದ ನಾಯಕರು ಚಿಂತನೆ ಮಾಡಬೇಕು ಎಂದರು.
ನಾವು ನಮ್ಮ ಪಕ್ಷದ ಕೆಲಸ ಮಾಡ್ತಿದ್ದೇವೆ. ರಾಜಕೀಯದಲ್ಲಿ ಯಾವತ್ತೂ ಶಿಸ್ತಿನಿಂದ ಇರಬೇಕು. ಅವರ ಶಿಸ್ತಿನಿಂದ ಅವರು ರಾಜಕೀಯ ಮಾಡಲಿ, ನಮ್ಮ ಶಿಸ್ತಿನಿಂದ ನಾವು ರಾಜಕೀಯ ಮಾಡುತ್ತೇವೆ. ಆ ಶಿಸ್ತು ಎಲ್ಲಾದರೂ ಏನಾದರೂ ಆದಾಗ ನಾವು ಉತ್ತರ ಕೊಡುತ್ತೇವೆ. ಇವತ್ತಿನವರೆಗೂ ಆ ಸಂದರ್ಭ ಏನೂ ಇಲ್ಲ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ಅವರಿಗೆ ಚನ್ನರಾಜ ಹಟ್ಟಿಹೊಳಿ ಟಾಂಗ್ ನೀಡಿದರು.
ಓದಿ: ಗುಜರಾತ್ ಎಲೆಕ್ಷನ್: ಸರತಿ ಸಾಲಿನಲ್ಲಿ ನಿಂತು ಪ್ರಧಾನಿ ಮೋದಿ, ಅಮಿತ್ ಶಾ ಮತದಾನ