ಚಿಕ್ಕೋಡಿ: ರಾಜ್ಯದ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಖೇನ ತಿಳಿದು ಬಂದಿದೆ. ನನಗೆ ಇಲ್ಲಿಯವರೆಗೂ ಯಾವುದೇ ಕರೆ ಬಂದಿಲ್ಲ. ನನಗೆ ಸಚಿವನಾಗಲು ಕರೆದರೆ ಹೋಗಿ ಸಚಿವನಾಗುತ್ತೇನೆ ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿದರು.
ಜ. 12 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಸನಗೌಡ ಯತ್ನಾಳ ಅವರು ಬಿಎಸ್ವೈ ಸಂಪುಟದಲ್ಲಿ ತಾನು ಮಂತ್ರಿ ಆಗಲ್ಲ ಎಂದಿದ್ದು ಅವರವರ ವೈಯಕ್ತಿಕ ವಿಚಾರ. ಹೈಕಮಾಂಡ್ ಮತ್ತು ಪಕ್ಷ ಕರೆದರೆ ಅವರೂ ಸಹ ಮಂತ್ರಿಯಾಗಲಿ ಎಂದರು.ಮಂತ್ರಿಗಿರಿಗಾಗಿ ಹಿಂದೆಯೂ ನಾನು ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಸ್ಪಷ್ಟ ಪಡಿಸಿದರು. ಉಮೇಶ್ ಕತ್ತಿಯವರಿಗೆ ಮಂತ್ರಿಗಿರಿ ತಪ್ಪಿಸುವ ಹುನ್ನಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ಸ್ಥಾನವನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ, ನಸೀಬ್ ಯಾರ ಕೈಯಲ್ಲೂ ಇಲ್ಲ, ಮಂತ್ರಿಗಿರಿ ನೀಡಿದರೆ ಮಂತ್ರಿಯಾಗುವೆ ಇಲ್ಲವಾದರೆ ಕ್ಷೇತ್ರದಲ್ಲಿ ಕೆಲಸದಲ್ಲಿರುವೆ ಎಂದು ಹೇಳಿದರು.ಇದನ್ನೂ ಓದಿ:ನಿರ್ಧಾರ ಮಾಡಿ ಆಗಿದೆ, ಪ್ರತಿಭಟಿಸಿ ನನ್ನನ್ನು ನೋಯಿಸಬೇಡಿ: ಅಭಿಮಾನಿಗಳಲ್ಲಿ ತಲೈವಾ ಮನವಿ