ETV Bharat / state

ಪೊಲೀಸರ ಜತೆ ವಾಗ್ವಾದ:  ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್​​  ಪುತ್ರ ಪೊಲೀಸರ ವಶಕ್ಕೆ

author img

By

Published : May 29, 2019, 3:47 PM IST

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃನಾಲ್​ ರೈತರ ಪರ ಪ್ರತಿಭಟನೆ ನಡೆಸುವ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ ನಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ.

ಮೃನಾಲ್ ಹೆಬ್ಬಾಳಕರ್

ಬೆಳಗಾವಿ: ರೈತರ ಪರವಾಗಿ ಪ್ರತಿಭಟನೆ ನಡೆಸುವ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಬೆಳಗಾವಿ ‌ಗ್ರಾಮೀಣ ಕ್ಷೇತ್ರದ ‌ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್‌ ಮುಖಂಡ ಮೃನಾಲ್ ಹೆಬ್ಬಾಳಕರ್​ನನ್ನು ಬೆಳಗಾವಿ ‌ಗ್ರಾಮೀಣ ಠಾಣೆಯ ‌ಪೊಲೀಸರು‌ ವಶಕ್ಕೆ‌ ಪಡೆದಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿರುವ ಹಲಗಾ ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಕ್ರಮಿಸಿಕೊಂಡ ಪ್ರದೇಶದಲ್ಲಿ ಇಂದು ಕಾಮಗಾರಿ ಆರಂಭಿಸಿಲು ಆಗಮಿಸಿದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ರೈತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿದೆ. ರೈತರ ಪರವಾಗಿ ಹೆಬ್ಬಾಳ್ಕರ್ ಪುತ್ರ ಮೃನಾಲ್ ಪೊಲೀಸರ ಜತೆ ಮಾತನಾಡುತ್ತಾ ವಾಗ್ವಾದ ನಡೆಸಿದ್ದಾರೆ. ಈ ವೇಳೆ‌, ಬೆಳಗಾವಿ ‌ಠಾಣೆಯ ಪೊಲೀಸರು‌ ಮೃನಾಲ್ ಹೆಬ್ಬಾಳಕರ್ ಸೇರಿದಂತೆ ಹಲವು ರೈತರನ್ನು ವಶಕ್ಕೆ ಪಡೆದಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.