ETV Bharat / state

ಕಬ್ಬು ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು: ಶಿವರಾಮ್​ ಹೆಬ್ಬಾರ್​​

ಬೆಳಗಾವಿ ಜಿಲ್ಲೆಯ ನಾಲ್ಕೈದು ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಪಾವತಿ ಮಾಡಿದ್ದರಿಂದ ಸಕ್ಕರೆ ಕಾರ್ಖಾನೆಗಳು ಒತ್ತಡದಿಂದ ಮುಕ್ತವಾಗಿವೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್​ ಹೆಬ್ಬಾರ್​​ ತಿಳಿಸಿದ್ದಾರೆ.

Shivaram_Hebbar
ಶಿವರಾಮ್​ ಹೆಬ್ಬಾರ್
author img

By

Published : Jun 22, 2020, 5:07 PM IST

ಬೆಳಗಾವಿ: ಮಂಡ್ಯದಂತೆ ಬೆಳಗಾವಿ ಕೂಡ ಸಕ್ಕರೆ ನಾಡು. ಹೀಗಾಗಿ ಇಲ್ಲಿನ ಕಬ್ಬು ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್​ ಹೆಬ್ಬಾರ್​​ ಭರವಸೆ ನೀಡಿದರು.

ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್​ ಹೆಬ್ಬಾರ್
ನಗರದ ಸದಾಶಿವ ನಗರದಲ್ಲಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು, ಕಾರ್ಯಕರ್ತರು ಹಮ್ಮಿಕೊಂಡ ಸ್ವಾಗತ ಸಭೆಯಲ್ಲಿ ಮಾತನಾಡಿ, ನನ್ನ ಇಲಾಖೆಯ ದೊಡ್ಡ ಆಸ್ತಿಯೇ ಬೆಳಗಾವಿ. ಹೀಗಾಗಿ ಅತಿ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ಈ ಜಿಲ್ಲೆ ರಾಜ್ಯದಲ್ಲಿಯೇ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಿದೆ ಎಂದರು. ಇನ್ನು ಕಾರ್ಮಿಕ ಇಲಾಖೆಯಲ್ಲಿ ಹೊಸ ಆಂದೋಲನ ಮಾಡುವ ಮೂಲಕ ಬರುವ ಅಧಿವೇಶನದಲ್ಲಿ ಅನೇಕ ಮಹತ್ವದ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿರುವ ಅಂದಾಜು ಒಂದು ಕೋಟಿ ಅಸಂಘಟಿತ ಕಾರ್ಮಿಕರ ಯೋಗಕ್ಷೇಮ ಸುಧಾರಿಸುವ ರೀತಿಯಲ್ಲಿ ನೂತನ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಸೌಲಭ್ಯ ಒದಗಿಸಲು ಬಿಎಸ್​ವೈ ಸರ್ಕಾರ ಬದ್ಧ: ರಾಜ್ಯದ 64 ಕಾರ್ಖಾನೆಗಳಿಂದ 70 ಸಾವಿರ ಕೋಟಿ ಸಕ್ಕರೆ ನುರಿಸಲಾಗಿದ್ದು, 71.800 ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ‌. ಅದರಲ್ಲಿ ಶುಗರ್ ಕಾರ್ಖಾನೆ ಮಾಲೀಕರಿಂದ ಕೇವಲ‌ 600 ಕೋಟಿ ರೂ.ಗಳು ಮಾತ್ರ ಬಾಕಿ ಉಳಿದಿದ್ದು, ಜಿಲ್ಲೆಯ ನಾಲ್ಕೈದು ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಪಾವತಿ ಮಾಡಿದ್ದರಿಂದ ಸಕ್ಕರೆ ಕಾರ್ಖಾನೆಗಳು ಒತ್ತಡದಿಂದ ಮುಕ್ತವಾಗಿವೆ. ಕಾರ್ಮಿಕರು ಹಾಗೂ ಕೃಷಿಗರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಯಡಿಯೂರಪ್ಪ ಸರ್ಕಾರ ಬದ್ಧವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.