ETV Bharat / state

ಪಾದಯಾತ್ರೆ ಕೈ ಬಿಡಿ, ಮಾತುಕತೆಗೆ ಬನ್ನಿ.. ಕೂಡಲಸಂಗಮ ಶ್ರೀಗಳಿಗೆ ಸಚಿವ ನಿರಾಣಿ ಮನವಿ..

ಶಿವಶಂಕರ್, ಕಾಶಪ್ಪನವರ್, ಯತ್ನಾಳ್ ಎಲ್ಲರೂ ನಮ್ಮ ಸಹೋದರರು. ನಾವೆಲ್ಲರೂ ಬೇರೆ ಬೇರೆ ಪಕ್ಷದಲ್ಲಿರಬಹುದು. ಆದ್ರೆ, ಎಲ್ಲರೂ ಒಂದೇ ಸಮುದಾಯದವರು. ರಾಜಕೀಯವಾಗಿ ಈ ಹೋರಾಟ ವಿಷಯಾಂತರ ಆಗಬಾರದು. ದಯವಿಟ್ಟು ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡ್ತೇನೆ. ಪಂಚಮಸಾಲಿ ಪೀಠದ ಇಬ್ಬರು ಶ್ರೀಗಳು ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ..

author img

By

Published : Jan 30, 2021, 6:01 PM IST

Minister Muragesh Nirani
ಕೂಡಲಸಂಗಮ ಸ್ವಾಮೀಜಿಗೆ ಸಚಿವ ಮುರಗೇಶ್​ ನಿರಾಣಿ ಮನವಿ

ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ಕೈಬಿಟ್ಟು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆಗೆ ಬರುವಂತೆ ಸಚಿವ ಮುರುಗೇಶ್​ ನಿರಾಣಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದಾರೆ.

ಕೂಡಲಸಂಗಮ ಸ್ವಾಮೀಜಿಗೆ ಸಚಿವ ಮುರುಗೇಶ್​ ನಿರಾಣಿ ಮನವಿ..

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದಲ್ಲಿ ಅತ್ಯಂತ ಕಡು ಬಡವರಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಹಿಂದೆ ನಮ್ಮ ಸರ್ಕಾರ ಇದ್ದಾಗ 2ಎ ಮೀಸಲಾತಿ ಸಿಗಬೇಕೆಂದು ಸಬ್ ಕಮಿಟಿ ರಚನೆ ಮಾಡಲಾಗಿತ್ತು. ಆ ಕಮಿಟಿಯಲ್ಲಿ ನಾನು, ಸಿಎಂ ಉದಾಸಿ, ಬಸವರಾಜ ಬೊಮ್ಮಾಯಿ ಸೇರಿ ಹಲವರಿದ್ದೆವು.

ಇಂದು ಪ್ರತಿಭಟನೆ ಮಾಡುತ್ತಿರುವ ನಮ್ಮ ಸಹೋದರರು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಬಹುದಿತ್ತು. ಪಂಚಮಸಾಲಿ ಸಮುದಾಯಕ್ಕೆ 2ಎ ಸೇರ್ಪಡೆಗೆ 10 ವರ್ಷದ ಹಿಂದೆ ಹೋರಾಟ ಆರಂಭಿಸಿದವನೇ ನಾನು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು. ಬೇರೆ ಸಮುದಾಯಕ್ಕೆ ತೊಂದರೆಯೂ ಆಗಬಾರದು.

ಈ ನಿರ್ಧಾರ ಕೈಗೊಳ್ಳಲು ಸಮಯ ಬೇಕು. ಸಿಎಂ ಗಮನಕ್ಕೂ ತಂದಿದ್ದೇನೆ. ಕೇಂದ್ರದ ಸಚಿವರಿಗೂ ಮನವಿ ಮಾಡಿದ್ದೇನೆ. ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ, ಪಾದಯಾತ್ರೆ ಕೈ ಬಿಡಲು ಮನವಿ ಮಾಡುತ್ತಿದ್ದೇನೆ. ಹೋರಾಟ, ಪಾದಯಾತ್ರೆ ಸ್ಥಗಿತಗೊಳಿಸಿ ಮಾತುಕತೆಗೆ ಬರಬೇಕು. ಬಸನಗೌಡ ಪಾಟೀಲ್ ಯತ್ನಾಳ್​ ನಮ್ಮ ವೈರಿನಾ, ಅವರು ನಮ್ಮ ಸಮಾಜದ ಹಿರಿಯರು.

ಶಿವಶಂಕರ್, ಕಾಶಪ್ಪನವರ್, ಯತ್ನಾಳ್ ಎಲ್ಲರೂ ನಮ್ಮ ಸಹೋದರರು. ನಾವೆಲ್ಲರೂ ಬೇರೆ ಬೇರೆ ಪಕ್ಷದಲ್ಲಿರಬಹುದು. ಆದ್ರೆ, ಎಲ್ಲರೂ ಒಂದೇ ಸಮುದಾಯದವರು. ರಾಜಕೀಯವಾಗಿ ಈ ಹೋರಾಟ ವಿಷಯಾಂತರ ಆಗಬಾರದು. ದಯವಿಟ್ಟು ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡ್ತೇನೆ. ಪಂಚಮಸಾಲಿ ಪೀಠದ ಇಬ್ಬರು ಶ್ರೀಗಳು ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದರು.

ಹರಿಹರ ಪೀಠಕ್ಕೆ ಅನುದಾನ ಮಂಜೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಹರಿಹರ ಪೀಠಕ್ಕೆ ₹5 ಕೋಟಿ ನೀಡಲು ನಿರ್ಧರಿಸಿದ್ದೆವು. ಆಗ ಸ್ವಾಮೀಜಿ ತಿರಸ್ಕರಿಸಿದ್ದರು. ಈಗ ಅನುದಾನ ಕೇಳಿದ್ದು ₹10 ಕೋಟಿ. ಅನುದಾನ ಪೈಕಿ ಎರಡು ಕೋಟಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಕೂಡಲಸಂಗಮ ಪೀಠ ನಮಗೆ ಬೇರೆಯದ್ದಲ್ಲ. ನಾವು ಬೇಧಭಾವ ಮಾಡಿಲ್ಲ.

ಓದಿ: ಕೂಡಲಸಂಗಮ ಸ್ವಾಮೀಜಿ ಜೊತೆ ಚರ್ಚೆಗೆ ಸಿಎಂ ಸಿದ್ಧರಿದ್ದಾರೆ: ಸಚಿವ ಮುರುಗೇಶ್ ನಿರಾಣಿ

ನಮಗೆ 2ಎ ಮೀಸಲಾತಿ ಸಿಗಬೇಕು ಎಂಬುದಕ್ಕೆ ಬೆಂಬಲ ಇದೆ. ಸಿಎಂ ಯಡಿಯೂರಪ್ಪರಿಗೆ ವಿಷಯ ಅರ್ಥವಾಗಿದೆ. ಹೋರಾಟ ಕೈಬಿಡಿ. ಗಮನ ಸೆಳೆಯಲು ಪಾದಯಾತ್ರೆ ಮಾಡಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಒಯ್ಯದೇ ನಾವು ಶಾಂತಿಯುತವಾಗಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳೋಣ.

ನಾನು ಅಧಿಕಾರದಲ್ಲಿರುವ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ಎರಡು ಪೀಠಗಳು ನಮ್ಮ ಕಣ್ಣು ಇದ್ದಂತೆ, ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದರು. ಸಮಾಜದ ಸಂಘಟನೆ ಹಾಗೂ ಮೀಸಲಾತಿ ‌ಹೋರಾಟಕ್ಕೆ ಕಳೆದ 12 ವರ್ಷಗಳಿಂದ ಸಕ್ರಿಯನಾಗಿದ್ದೇನೆ.

ನಾನೀಗ ಸಚಿವನಾಗಿದ್ದೇನೆ. ಪಾದಯಾತ್ರೆಯಲ್ಲಿ ಭಾಗಿಯಾಗಲು ಆಗಲ್ಲ. ಆದರೆ, ನಮ್ಮ ನಾಯಕರನ್ನು ಮನವೊಲಿಸಿದ್ದೇನೆ. ಸಿಎಂ ಯಡಿಯೂರಪ್ಪ, ಕೇಂದ್ರ ಸರ್ಕಾರಕ್ಕೆ ಈ ವಿಷಯ ಅರ್ಥ ಆಗಿದೆ. ದಯವಿಟ್ಟು ಪಾದಯಾತ್ರೆ ಸ್ಥಗಿತಗೊಳಿಸಿ ಮಾತುಕತೆಗೆ ಬನ್ನಿ ಎಂದು ಸಚಿವ ಮುರುಗೇಶ್​ ನಿರಾಣಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.