ETV Bharat / state

ಬಿಜೆಪಿಗೆ ಅನ್ಯ ಪಕ್ಷದವರನ್ನು ಕರೆತರುವ ಸಾಮರ್ಥ್ಯ ರಮೇಶ್ ಜಾರಕಿಹೊಳಿ‌ಗಿದೆ: ಸಚಿವ ಕಾರಜೋಳ

author img

By

Published : Jan 27, 2022, 5:30 AM IST

Updated : Jan 27, 2022, 7:00 AM IST

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಬೇರೆ ಪಕ್ಷದ ನಾಯಕರು ಎದುರಾದರೆ ಎಲ್ಲರೂ ಮಾತನಾಡುವುದು ಸಹಜ ಎಂದು ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

minister-govinda-karajola-statement-on-ramesh-jarakiholi
ಸಚಿವ ಕಾರಜೋಳ ಹೇಳಿಕೆ

ಬೆಳಗಾವಿ: ಅನ್ಯಪಕ್ಷದ ಶಾಸಕರನ್ನು ಬಿಜೆಪಿಗೆ ಕರೆತರುವ ಸಾಮರ್ಥ್ಯ ರಮೇಶ್ ಜಾರಕಿಹೊಳಿ‌ ಅವರಿಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಓರ್ವ ಸಮರ್ಥ ನಾಯಕ. ಮಾಜಿ ಸಚಿವರೂ ಆಗಿರುವ ಅವರು ಅನುಭವಿ ರಾಜಕಾರಣಿ. ಅನ್ಯ ಪಕ್ಷದ ಶಾಸಕರು ಅವರ ಸಂಪರ್ಕದಲ್ಲಿರಬಹುದು ಎಂದರು.

ಹೀಗಾಗಿ ಅವರು ಬಿಜೆಪಿಗೆ ಎಷ್ಟು ಜನರನ್ನು ಬೇಕಾದರೂ ಕರೆ ತರಬಹುದು. ಅವರಲ್ಲಿ ಆ ಶಕ್ತಿ ಇದೆ. ಜಾರಕಿಹೊಳಿ‌ ಎಷ್ಟು ಜನ ಶಾಸಕರನ್ನು ಬೇಕಾದರೂ ಕರೆತರಬಹುದು. ಅವರೊಂದಿಗೆ ಸಂಪರ್ಕದಲ್ಲಿರುವುವವರು ಬಿಜೆಗೆ ಬರಬಹುದು ಎಂದು ಆಹ್ವಾನ ನೀಡಿದರು. ಆದರೆ ಈ ಕುರಿತಂತೆ ಎಷ್ಟು ಜನ ಶಾಸಕರು ಸಂಪರ್ಕದಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ಬಿಜೆಪಿಯು ಎಲ್ಲರ ಶಕ್ತಿಯನ್ನು ಬಳಸಿಕೊಳ್ಳಲು ಸಮರ್ಥವಿದೆ ಎಂದು ಹೇಳಿದ್ದಾರೆ.

ಸಚಿವ ಗೋವಿಂದ ಕಾರಜೋಳ ಹೇಳಿಕೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಿಮಾನ ನಿಲ್ದಾಣದಲ್ಲಿ ಡಿಕೆಶಿ ಜೊತೆಗೆ ಕೆಲ ಬಿಜೆಪಿ ನಾಯಕರು ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ ಬೇರೆ ಪಕ್ಷದ ನಾಯಕರು ಎದುರಾದರೆ ಮಾತನಾಡುವುದು ಸಹಜ. ಲಾಡ್ಜ್​ಗಳಲ್ಲಿ ಅಕ್ಕಪಕ್ಕದಲ್ಲಿ ರೂಂ ಇದ್ದರೆ ಕುಳಿತು ಚಹಾ ಸೇವಿಸುವುದು ಕೂಡ ಸಾಮಾನ್ಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಪ್ರತಿಪಕ್ಷ ನಾಯಕರಾಗಿ ಯೋಗಿ ನೋಡಲು ಬಯಸುತ್ತೇನೆ: ರಾಕೇಶ್​ ಟಿಕಾಯತ್​

Last Updated : Jan 27, 2022, 7:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.