ETV Bharat / state

ಹೃದಯಾಘಾತದಿಂದ ಮೃತಳಾದ ಮಂಡ್ಯದ ಯುವತಿಗೆ ಕರ್ನಾಟಕದ ಗಡಿಯಲ್ಲಿ ಅಂತ್ಯ ಸಂಸ್ಕಾರ - ಅಂತ್ಯ ಸಂಸ್ಕಾರ

ಎರಡು ದಿನಗಳ ಹಿಂದೆ ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಮಂಡ್ಯದ ಟೆಕ್ಕಿ ಸೌಮ್ಯಳ ಮೃತ ದೇಹವನ್ನು ಊರಿಗೆ ತರಲು ಮಂಡ್ಯ ಜಿಲ್ಲಾಡಳಿತ ನಿರಾಕರಿಸಿದ ಕಾರಣ, ಕರ್ನಾಟಕದ ಗಡಿ ಭಾಗದಲ್ಲೇ ಅಂತ್ಯ ಸಂಸ್ಕಾರ ಮಾಡಲಾಗಿದೆ.

Mandya tekki
ಮಂಡ್ಯದ ಟೆಕ್ಕಿ ಸೌಮ್ಯ
author img

By

Published : May 11, 2020, 1:48 PM IST

ಚಿಕ್ಕೋಡಿ: ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯದ ಮಹಿಳಾ ಟೆಕ್ಕಿಗೆ ಕರ್ನಾಟಕದ ಗಡಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಗಡಿಯಲ್ಲಿರುವ ಕೊಗನೊಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಸೌಮ್ಯ ಟಿ.ಎ (35) ಎರಡು ದಿನಗಳ ಹಿಂದೆ ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಳು. ಈಕೆ ಮಂಡ್ಯ ಜಿಲ್ಲೆಯ ಮುದ್ದೂರು ತಾಲೂಕಿನ ತೈಲೂರು ಗ್ರಾಮದ ನಿವಾಸಿಯಾಗಿದ್ದಾಳೆ. ಕೊರೊನಾ ಟೆಸ್ಟ್ ಮಾಡಿಸಿರದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಮೃತದೇಹವನ್ನು ತರಲು ಜಿಲ್ಲಾಡಳಿತ ನಿರಾಕರಿಸಿತ್ತು.

funeral
ಅಂತ್ಯ ಸಂಸ್ಕಾರ

ಇದರಿಂದಾಗಿ ಗಡಿಯಲ್ಲೇ ಒಂದು ದಿನ ಪೂರ್ತಿ ಸೌಮ್ಯಳ ಮೃತ ದೇಹದೊಂದಿಗೆ ಪತಿ ಶರತ್, ಪುಟ್ಟ ಮಗಳು ಶ್ವೇತಾ ಹಾಗೂ ತಂದೆ ಅಪ್ಪಯ್ಯ (ನಿವೃತ್ತ ಪಿಎಸ್ಐ) ಪರದಾಡಿದ್ದರು.

ನಂತರ ಘಟನೆಯ ಮಾಹಿತಿ ತಿಳಿದು ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಕುಟುಂಬಸ್ಥರನ್ನು ಭೇಟಿ ಮಾಡಿದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಚಿಕ್ಕೋಡಿ ಎಸಿ ರವಿಂದ್ರ ಕರಲಿಂಗಣವರ್, ಕುಟುಂಬಸ್ಥರ ಜೊತೆ ಸೇರಿ ಚೆಕ್ ಪೋಸ್ಟ್ ಬಳಿ ಇರುವ ದೂಧಗಂಗಾ ನದಿ ದಡದಲ್ಲಿ ಸೌಮ್ಯಳ ಅಂತ್ಯ ಸಂಸ್ಕಾರ ನೇರವೇರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.