ಬೆಳಗಾವಿ: ವರುಣಾರ್ಭಟಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್‌ನಲ್ಲಿ ಗುಡ್ಡ ಕುಸಿದು ಕರ್ನಾಟಕ ಸಂಪರ್ಕಿಸುವ ರಸ್ತೆ ಐದು ಘಂಟೆಗಳ ಕಾಲ ಬಂದ್ ಆಗಿತ್ತು. ಗೋವಾ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಐದು ಗಂಟೆಗಳ ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.
ಮಹಾರಾಷ್ಟ್ರಕ್ಕೆ ಸೇರಿದ ಮಾಲಶೇಜ್ ಘಾಟ್ ಗೋವಾ ಸಮೀಪದಲ್ಲಿದೆ. ಪಶ್ಚಿಮ ಘಟ್ಟದ ಮಳೆಯಬ್ಬರಕ್ಕೆ ಇಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಕರ್ನಾಟಕ-ಗೋವಾ ಸಂಪರ್ಕಿಸುವ ರಸ್ತೆಯಲ್ಲೂ ಸಂಚಾರ ಸಮಸ್ಯೆ ಉಂಟಾಗಿತ್ತು. ಅನ್ಮೋಡ್ ಘಾಟ್‌ನಲ್ಲಿ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡಿದರು. ಗೋವಾದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಆಗಮಿಸಿ ಹೆದ್ದಾರಿ ಮೇಲೆ ಬಿದ್ದ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಿದರು.
ಇದನ್ನೂ ಓದಿ: ಮಳೆಯೋ ಮಳೆ: ಇಂದು ದ.ಕ, ಉ.ಕ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ