ETV Bharat / state

ಬಿಜೆಪಿ ಅಭ್ಯರ್ಥಿ 4 ಲಕ್ಷ ಮತಗಳಿಂದ ಗೆದ್ದರೆ ಸುರೇಶ್​ ಅಂಗಡಿಗೆ ನಿಜವಾದ ಶ್ರದ್ಧಾಂಜಲಿ: ಮಹೇಶ್​ ಟೆಂಗಿನಕಾಯಿ

ಬಿಜೆಪಿ ಅಭ್ಯರ್ಥಿ 4 ಲಕ್ಷ ಮತಗಳಿಂದ ಗೆದ್ದಾಗಲೇ ಸುರೇಶ್​ ಅಂಗಡಿಯವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ ಎಂದು ಮಹೇಶ ಟೆಂಗಿನಕಾಯಿ ಬೆಳಗಾವಿಯಲ್ಲಿ ಹೇಳಿದ್ದಾರೆ.

Mahesh Tenginakayi
ಮಹೇಶ್​ ಟೆಂಗಿನಕಾಯಿ
author img

By

Published : Feb 24, 2021, 7:46 PM IST

ಬೆಳಗಾವಿ: ಮುಂಬರುವ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 4 ಲಕ್ಷ ಮತಗಳಿಂದ ಗೆಲ್ಲಿಸಿದಾಗ ಮಾತ್ರ ಸುರೇಶ್​ ಅಂಗಡಿಯವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್​ ಟೆಂಗಿನಕಾಯಿ ಹೇಳಿದ್ದಾರೆ.

ಲೋಕಸಭಾ ಕ್ಷೇತ್ರದ ಆಯ್ದ ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಉಪಚುನಾವಣೆ ಬಿಜೆಪಿ ಕಾರ್ಯಕರ್ತರು ಊಹಿಸದೆ ಬಂದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಆದರೆ ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ಈಗಾಗಲೇ ಬಿಜೆಪಿಯಿಂದ ಚುನಾವಣಾ ಕಾರ್ಯ ಚಟುವಟಿಕೆ ಸಿದ್ದವಾಗಿದೆ. ಯಾವುದೇ ಕ್ಷಣದಲ್ಲೂ ಚುನಾವಣೆ ಘೋಷಣೆಯಾದರೂ ನಮ್ಮ ಕಾರ್ಯಕರ್ತರು ಸನ್ನದ್ದರಾಗಿರಬೇಕು. ಗ್ರಾಮಸ್ವರಾಜ್ಯ ಸಮಾವೇಶದ ಪರಿಣಾಮವೇ ನಮ್ಮ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಬರುವ ದಿನಗಳಲ್ಲಿ ಕೂಡ ಎಲ್ಲ ಪ್ರಮುಖರ ಜೊತೆಗೆ ಸಭೆ ನಡೆಸಲಾಗುವುದು ಎಂದರು.

ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಚುನಾವಣೆಯಲ್ಲಿ ಅಭ್ಯರ್ಥಿ ಮುಖ್ಯವಲ್ಲ, ಅವನ ಮುಂದಿರುವ ಕಮಲದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಿ ಗೆಲುವು ಸಾಧಿಸೋಣ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.