ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬುದು ಮಾಧ್ಯಮಗಳಿಂದ ಕೇಳಿ ಬರುತ್ತಿದೆ. ಭಾರತೀಯ ಜನತಾ ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಬದ್ಧರಾಗಿದ್ದೇವೆ ಎಂದು ಅಥಣಿ ಶಾಸಕ ಹಾಗೂ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ ಹೇಳಿದರು.
ಬೆಳಗಾವಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಒಳ್ಳೆಯ ಸುದ್ದಿ ಬರುತ್ತೆ ಅಂತಾ ಹೇಳಿದ್ದಾರೆ. ನನಗೆ ಈಗಾಗಲೇ ಸಿಹಿ ಸುದ್ದಿ ಬಂದಿದೆ, ಏನು ಅಂದ್ರೆ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯನ್ನು ಕಳೆದ ಸಚಿವ ಸಂಪುಟದಲ್ಲಿ ನೀಡಿದ್ದಾರೆ. ಸರಿಸುಮಾರು 1,486 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುದಿನಗಳ ಕಾಮಗಾರಿ ಮಂಜೂರು ಮಾಡಿದ್ದಾರೆ. ಇದರಿಂದಾಗಿ ನನಗೆ ಸಚಿವ ಸ್ಥಾನಕ್ಕಿಂತಲೂ ಬೃಹತ್ ನೀರಾವರಿ ಯೋಜನೆ ನೀಡಿದ್ದಾರೆ. ಇದು ನನಗೆ ಸಿಹಿ ಸುದ್ದಿ ಎಂದು ಹೇಳಿದರು.
ನಾವು ಸಚಿವ ಸ್ಥಾನಕ್ಕಾಗಿ ಯಾರು ಬಿಜೆಪಿಗೆ ಬಂದಿಲ್ಲಾ, ರಾಜಕೀಯ ಬದಲಾವಣೆ ಸಮಯದಲ್ಲಿ ನಾವು ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದು, ಯಾವುದೇ ಸಚಿವ ಸ್ಥಾನಕ್ಕೆ ಬಂದಿಲ್ಲಾ ನಮಗೆ ನಮ್ಮ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರ: ಪಂಚಮಸಾಲಿ ಸಮಾಜದ ಜೊತೆಗೆ ಇನ್ನೂ ಹಲವು ಸಮುದಾಯದವರು ಮೀಸಲಾತಿ ಕೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ, ಎಲ್ಲದರ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಶೀಘ್ರವೇ ವಿಶ್ವ ಕನ್ನಡ ಸಮ್ಮೇಳನ.. ರಾಜಕೀಯಕ್ಕಾಗಿ ಗಡಿ ಸಮಸ್ಯೆ ಸೃಷ್ಟಿ: ಮಹಾರಾಷ್ಟ್ರಕ್ಕೆ ಸಿಎಂ ಬೊಮ್ಮಾಯಿ ಟಾಂಗ್