ETV Bharat / state

ಕೊರೊನಾ ಕರ್ಫ್ಯೂಗೆ ನಿಯೋಜಿಸಿದ್ದ ಎಎಸ್ಐ ಅಸ್ವಸ್ಥ: ಸಹೋದ್ಯೋಗಿಗಳಿಂದ ಆರೈಕೆ

ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಕೆ.ಸಿ.ವ್ಯಾಪಾರಗಿ ಅವರಿಗೆ ಬಿಪಿ ಲೋ ಆಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು‌. ಈ ವೇಳೆ ಸ್ಥಳದಲ್ಲೇ ಇದ್ದ ಸಹೋದ್ಯೋಗಿಗಳು ಹಾಗೂ ಮಾಧ್ಯಮದವರು ಅವರನ್ನು ಆರೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ಯರು‌.

low BP On duty ASI ill at Belgavi
ಕೊರೊನಾ ಕರ್ಫ್ಯೂಗೆ ನಿಯೋಜಿಸಿದ್ದ ಎಎಸ್ಐ ಅಸ್ವಸ್ಥ
author img

By

Published : Apr 28, 2021, 1:59 PM IST

ಬೆಳಗಾವಿ: ಕೊರೊನಾ ತಡೆಗೆ ಸರ್ಕಾರ ಹೊರಡಿಸಿದ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಎಸ್ಐ ಓರ್ವರು ಅಸ್ವಸ್ಥಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಕೊರೊನಾ ಕರ್ಫ್ಯೂಗೆ ನಿಯೋಜಿಸಿದ್ದ ಎಎಸ್ಐ ಅಸ್ವಸ್ಥ

ನಗರದ ಅಶೋಕ ವೃತ್ತದಲ್ಲಿ ಸಂಚಾರಿ ಉತ್ತರ ವಲಯದ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಸಿ.ವ್ಯಾಪಾರಗಿ ಅವರಿಗೆ ಬಿಪಿ ಲೋ ಆಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು‌. ಈ ವೇಳೆ ಸ್ಥಳದಲ್ಲೇ ಇದ್ದ ಸಹೋದ್ಯೋಗಿಗಳು ಹಾಗೂ ಮಾಧ್ಯಮದವರು ಅಸ್ವಸ್ಥಗೊಂಡಿದ್ದ ಅವರನ್ನು ಆರೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ಯರು‌.

ಇಂದು ಬೆಳಿಗ್ಗೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐಗೆ ಸಕ್ಕರೆ ಖಾಯಿಲೆ ಇದೆ ಎನ್ನಲಾಗಿದ್ದು, ಬೆಳಿಗ್ಗೆಯಿಂದ ಖಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಂಡಿಲ್ಲ. ಜೊತೆಗೆ ಸಮಯಕ್ಕೆ ಸರಿಯಾಗಿ ಉಪಾಹಾರ ಸೇವಿಸಿಲ್ಲ. ಹೀಗಾಗಿ ಏಕಾಏಕಿ ಬಿಪಿ ಲೋ ಆಗಿ ಬಿದ್ದಿದ್ದಾರೆ ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದರು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ ಬೆನಕೆ ಅಸ್ವಸ್ಥಗೊಂಡಿದ್ದ ಎಎಸ್ಐ ವ್ಯಾಪರಗಿ ಅವರ ಆರೋಗ್ಯ ವಿಚಾರಿಸಿ ತೆರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.