ETV Bharat / state

ಬುಡಾ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಕ್ರಮ ಕೈಗೊಳ್ಳಲಿ: ಟೋಪಣ್ಣವರ - ವಿಡಿಯೋ ಗ್ರಾಫಿ

ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಬುಡಾದ ಅಧಿಕಾರಿಗಳು ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಇದು ಬುಡಾ ಆಯುಕ್ತ ಮಾತ್ರವಲ್ಲ, ಇದರಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು: ಆಮ್ ಆದ್ಮಿ ಪಕ್ಷದ ರಾಜಕುಮಾರ ಟೋಪಣ್ಣವರ

Rajkumar Topannavar spoke at a press conference.
ಆಮ್ ಆದ್ಮಿ ಪಕ್ಷದ ಮುಖಂಡ ರಾಜಕುಮಾರ ಟೋಪಣ್ಣವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Jun 8, 2023, 10:00 PM IST

ಬೆಳಗಾವಿ: ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೋ ಅಥವಾ ಭ್ರಷ್ಟಾಚಾರದ ಪರ ಕೆಲಸ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು‌ ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಉಸ್ತುವಾರಿ‌ ರಾಜಕುಮಾರ ಟೋಪಣ್ಣವರ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2022 ಮಾರ್ಚ್​ 18 ರಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಕ್ಷನ್ ಮಾಡದೆ ಸೈಟ್ ಹಂಚಿಕೆ ಮಾಡಿರುವ ಕುರಿತು ನಗರ ಪೊಲೀಸ್ ಇಲಾಖೆ, ಲೋಕಾಯುಕ್ತಕ್ಕೆ ದೂರು ನೀಡಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿರಲಿಲ್ಲ. ಆದರೆ ನ್ಯಾಯಾಲಯ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.

ಲೋಕಾಯುಕ್ತಕ್ಕೆ ಕಳೆದ 9 ತಿಂಗಳ ಹಿಂದೆ ದೂರು ನೀಡಿದರೂ ಭ್ರಷ್ಟಾಚಾರ ನಡೆಸಿದ ಅಧಿಕಾರಿ ಮೇಲೆ ಎಫ್‌ಐಆರ್ ದಾಖಲಿಸಿರಲಿಲ್ಲ. ಈಗ ನ್ಯಾಯಾಲಯ ಆದೇಶ ನೀಡಿದೆ. ಇನ್ನಾದರೂ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವ ಕೆಲಸ ಬಿಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸರಕಾರಿ ಇಲಾಖೆಯ 50 ಲಕ್ಷ ರೂ. ಮೇಲ್ಪಟ್ಟ ಜಾಹೀರಾತುಗಳನ್ನು ಪ್ರಾದೇಶಿಕ ಪತ್ರಿಕೆಗಳಿಗೆ ನೀಡಲು ಬರುವುದಿಲ್ಲ. ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡಬೇಕು. ಅದು ವಾರ್ತಾ ಇಲಾಖೆಯಿಂದ ನೀಡಬೇಕು. ಆದರೆ ಬುಡಾ ಅಧಿಕಾರಿಗಳು ಎಲ್ಲಾ ಜಾಹೀರಾತು ನೀಡುವಾಗ ವಾರ್ತಾ ಇಲಾಖೆಯಿಂದ ನೀಡುತ್ತಾರೆ. ಆದರೆ ಬೆಳಗಾವಿ ಬುಡಾ ಅಧಿಕಾರಿಗಳು ನೇರವಾಗಿ ಪತ್ರಿಕೆಗೆ ಜಾಹೀರಾತು ನೀಡಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ, ಸರಕಾರದ ಕಣ್ಣಿಗೆ ಮಣ್ಣೇರಚ್ಚಿದ್ದಾರೆ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.

ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಬುಡಾದ ಅಧಿಕಾರಿಗಳು ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಇದು ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮಾತ್ರ ಅಲ್ಲ ಇದರಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. 111 ಸೈಟ್ ಹಂಚಿಕೆಯ ವಿಡಿಯೋ ಗ್ರಾಫಿ ಕನಿಷ್ಠ 1600 ನಿಮಿಷ ಆಗಬೇಕು. ಆದರೆ ಬುಡಾ ಅಧಿಕಾರಿಗಳು ವಿಡಿಯೋಗ್ರಾಫಿ ದಾಖಲೆ ನೀಡಿದ್ದು ಒಂದು ಗಂಟೆ ಏಳು ನಿಮಿಷದ ವಿಡಿಯೋ ನೀಡಿದ್ದಾರೆ.

111 ಸೈಟ್ ಹಂಚಿಕೆ ಮಾಡಿದ್ದು ಆಕ್ಷನ್ ಪ್ರಕ್ರಿಯೆ ವಿಡಿಯೋ ಒಂದು ಗಂಟೆ ಏಳು ನಿಮಿಷದಲ್ಲಿ ಮಾಡಲು ಹೇಗೆ ಸಾಧ್ಯ. ಅಲ್ಲದೆ ವಿಡಿಯೋಗೆ ಆಡಿಯೋ ಇಲ್ಲ. ದಿನಾಂಕ ನಮೂದು ಆಗಿಲ್ಲ. ಈ ವಿಡಿಯೋ ಆಕ್ಷನ್ ಮಾಡಿದ್ದೋ ಅಥವಾ ಬೇರೆಯದ್ದೋ ಆ ಕುರಿತು ತನಿಖೆ ನಡೆಸಬೇಕು ಎಂದು‌ ರಾಜಕುಮಾರ ಟೋಪಣ್ಣವರ ಒತ್ತಾಯಿಸಿದರು. ಸರಕಾರಿ ರಜೆ ಇದ್ದ ವೇಳೆ ಬುಡಾದ ಸೈಟ್ ಹಂಚಿಕೆ ಮಾಡಿದ್ದಾರೆ. ಈ ಕುರಿತು ವಿಡಿಯೋ ಗ್ರಾಫಿ ನೀಡಬೇಕೆಂದು ಕೇಳಿದಾಗ ಅವರು ವಿಡಿಯೋ ಕ್ರಿಯೆಟ್ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಟೋಪಣ್ಣವರ ಆರೋಪಿಸಿದರು.

ಇದನ್ನೂಓದಿ: ಕಾಂಗ್ರೆಸ್​ ಸೇರಿ ವಿಪಕ್ಷ ನಾಯಕನ ಸ್ಥಾನ ಕಳೆದುಕೊಂಡರಾ ಲಕ್ಷ್ಮಣ ಸವದಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.