ETV Bharat / state

ಬೆಳಗಾವಿ ಲೋಕಸಭಾ ಉಪಚುನಾವಣೆ: ಸೆಕ್ಟರ್ ಅಧಿಕಾರಿಗಳ ಜತೆಗೆ ಪಾಲಿಕೆ ಆಯುಕ್ತರ ಸಭೆ - ಬೆಳಗಾವಿ ಲೋಕಸಭೆ ಉಪಚುನಾವಣೆ,

ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆ ಸೆಕ್ಟರ್ ಅಧಿಕಾರಿಗಳ ಜತೆಗೆ ಪಾಲಿಕೆ ಆಯುಕ್ತರ ಸಭೆ ನಡೆಸಿದರು.

Corporation Commissioners Meeting,  Corporation Commissioners Meeting with Sector Officers,  Lok Sabha by poll, Belagavi Lok Sabha by poll, belagavi Lok Sabha by poll news, ಪಾಲಿಕೆ ಆಯುಕ್ತರ ಸಭೆ, ಸೆಕ್ಟರ್ ಅಧಿಕಾರಿಗಳ ಜತೆಗೆ ಪಾಲಿಕೆ ಆಯುಕ್ತರ ಸಭೆ, ಬೆಳಗಾವಿ ಲೋಕಸಭೆ ಉಪಚುನಾವಣೆ, ಬೆಳಗಾವಿ ಲೋಕಸಭೆ ಉಪಚುನಾವಣೆ ಸುದ್ದಿ,
ಸೆಕ್ಟರ್ ಅಧಿಕಾರಿಗಳ ಜತೆಗೆ ಪಾಲಿಕೆ ಆಯುಕ್ತರ ಸಭೆ
author img

By

Published : Mar 26, 2021, 8:48 AM IST

ಬೆಳಗಾವಿ: ಉಪಚುನಾವಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ನಿಗಾ ವಹಿಸುವುದರ ಜೊತೆಗೆ ಸುಗಮ ಚುನಾವಣೆ ನಡೆಸಲು ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಹೇಳಿದರು.

ಸೆಕ್ಟರ್ ಅಧಿಕಾರಿಗಳ ಜತೆಗೆ ಪಾಲಿಕೆ ಆಯುಕ್ತರ ಸಭೆ

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ಸೆಕ್ಟರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸುಗಮ ಚುನಾವಣೆ ನಡೆಸಲು ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದರು.

ಸುದ್ದಿ, ಜಾಹೀರಾತುಗಳ ಮೇಲೆ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ

ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆ ಚುನಾವಣೆಗೆ ಸಂಬಂಧಿಸಿದ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರಿಶ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

Corporation Commissioners Meeting,  Corporation Commissioners Meeting with Sector Officers,  Lok Sabha by poll, Belagavi Lok Sabha by poll, belagavi Lok Sabha by poll news, ಪಾಲಿಕೆ ಆಯುಕ್ತರ ಸಭೆ, ಸೆಕ್ಟರ್ ಅಧಿಕಾರಿಗಳ ಜತೆಗೆ ಪಾಲಿಕೆ ಆಯುಕ್ತರ ಸಭೆ, ಬೆಳಗಾವಿ ಲೋಕಸಭೆ ಉಪಚುನಾವಣೆ, ಬೆಳಗಾವಿ ಲೋಕಸಭೆ ಉಪಚುನಾವಣೆ ಸುದ್ದಿ,
ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಭೇಟಿ

ನಗರದ ವಾರ್ತಾ ಭವನದಲ್ಲಿ ಆರಂಭಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರ (ಮೀಡಿಯಾ ಮಾನಿಟರಿಂಗ್ ಸೆಲ್)ಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಡಿಸಿ, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಟಿವಿ, ಕೇಬಲ್ ಟಿವಿ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರ, ಎಲ್‌ಇ.ಡಿ. ವಾಹನದ ಮೂಲಕ ಪ್ರಚಾರ ಕೈಗೊಳ್ಳಬೇಕಾದರೆ ಜಾಹೀರಾತು ವಿಷಯ ವಸ್ತುವಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಎಂಸಿಎಂಸಿಯಿಂದ ಪೂರ್ವಾನುಮತಿ ಪಡೆಯಬೇಕು ಎಂದಿದ್ದಾರೆ.

ಅನುಮತಿ ಪಡೆಯದಿದ್ದರೆ ಕಾನೂನು ಕ್ರಮ

ಅನುಮತಿಯನ್ನು ಪಡೆಯದೇ ಪ್ರಚಾರ ಕೈಗೊಂಡರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು. ಅದೇ ರೀತಿ ಮಾಧ್ಯಮ ಸಂಸ್ಥೆಗಳು ಕೂಡ ಪೂರ್ವಾನುಮತಿಯನ್ನು ಪಡೆಯದ ಜಾಹೀರಾತುಗಳನ್ನು ಪ್ರಸಾರ ಮಾಡಬಾರದು. ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಉಪ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮನವಿ ಮಾಡಿಕೊಂಡರು.

ಮಾಧ್ಯಮ ಕಣ್ಗಾವಲು ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ನೋಡಲ್ ಅಧಿಕಾರಿ ಹಾಗೂ ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಕಟ/ ಪ್ರಸಾರ ಆಗುವ ಎಲ್ಲ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್, ಮಾಧ್ಯಮ ಕಣ್ಗಾವಲು ಕೇಂದ್ರದ ಸಿಬ್ಬಂದಿ ಝಡ್.ಜಿ.ಸಯ್ಯದ್, ವಿನಾಯಕ ವಣ್ಣೂರ, ಕೆ.ಆರ್.ಕುಲಕರ್ಣಿ, ಎಂ.ಎಂ.ಪಾಟೀಲ, ಜಿ.ವೈ.ಕಾವಳೆ, ಕೆ.ಎಸ್.ಕಾಗಲೆ, ವಜ್ರಾ ಪಾಟೀಲ, ಜಿ.ಡಿ.ಹಳೆಮನಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.