ಚಿಕ್ಕೋಡಿ: ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ ಹಾಗೂ ಗುಜರಾತ್ಗೆ ಹೊರಟಿದ್ದ 62 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾನವಾಡ ಗ್ರಾಮದ ಬಳಿ ಮಧ್ಯಪ್ರದೇಶದ 56 ಹಾಗೂ ಗುಜರಾತ್ನ 11 ಕಾರ್ಮಿಕರು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಡಲು ಸಿದ್ಧರಾಗಿದ್ದರು. ರಾಜ್ಯದಲ್ಲಿ ಕೊರೊನಾ ಭೀತಿ ಇರುವ ಹಿನ್ನೆಲೆ ಕಾರ್ಮಿಕರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಮೋರಾರ್ಜಿ ವಸತಿ ಶಾಲೆಗೆ ರವಾನೆ ಮಾಡಲಾಗಿದೆ.
ಎಲ್ಲಾ ಕಾರ್ಮಿಕರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ತಾಲೂಕಾಡಳಿತ ಹಾಗೂ ಇಬ್ಬನಿ ಫೌಂಡೇಶನ್ ಮತ್ತು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಯುವ ಸಮಾಜ ಸೇವಾ ಸಂಘದ ವತಿಯಿಂದ ಊಟೋಪಚಾರ ಮಾಡಲಾಗಿದೆ.