ETV Bharat / state

ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಆರ್​ಎಸ್​ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ - Lakshmi Hebbalkar statement about siddaramayaa amrutha mahothsava

ಭಾರತ ಸ್ವತಂತ್ರವಾದಾಗಿನಿಂದಲೂ ಆರ್​ಎಸ್​ಎಸ್​ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿಲ್ಲ- ಆದ್ರೆ ನಾವು ಇದರಲ್ಲಿ ರಾಜಕೀಯ ಮಾಡಲ್ಲ- ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

lakshmi-hebbalkar-said-the-indian-flag-never-hosted-on-the-rss-office-since-independence
ಸ್ವತಂತ್ರ ಸಿಕ್ಕಾಗಿನಿಂದಲೂ ಆರ್ ಎಸ್ ಎಸ್ ಕಚೇರಿ ಮೇಲೆನೆ ಭಾರತದ ಬಾವುಟ ಹಾರಿಸಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್
author img

By

Published : Jul 25, 2022, 3:49 PM IST

ಬೆಳಗಾವಿ : ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಗಿದೆ. ಈ ವರ್ಷವನ್ನು ಆಜಾದಿ ಕಾ ಅಮೃತ್​ ಮಹೋತ್ಸವ ಎಂದು ಆಚರಿಸಲಾಗುತ್ತಿದೆ. ಆದರೆ, ಸ್ವಾತಂತ್ರ್ಯ ಸಿಕ್ಕಂದಿನಿಂದಲೂ ಆರ್.ಎಸ್.ಎಸ್ ಕಚೇರಿ ಮೇಲೆನೇ ಭಾರತದ ಬಾವುಟ ಹಾರಿಸಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ವಿಷಯವನ್ನು ರಾಜಕೀಯವಾಗಿ ನೋಡಲು ಬರಲ್ಲ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ರಾಜಕಾರಣದಿಂದ ನೋಡೋದಿಲ್ಲ. ರಾಜಕೀಯೇತರವಾಗಿ ನೋಡುತ್ತೇನೆ ಎಂದು ಹೇಳಿದರು.

ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಆರ್ ಎಸ್ ಎಸ್ ಕಚೇರಿ ಮೇಲೆ ಭಾರತದ ಬಾವುಟ ಹಾರಿಸಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್

ರಾಷ್ಟ್ರಪತಿ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆದಿವಾಸಿ ಮಹಿಳೆ ಗೆದ್ದಿದ್ದಾರೆ. ದಲಿತ ಮಹಿಳೆ ಗೆದ್ದಿದ್ದಾರೆ. ವಿಶ್ವದ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವದ ದೇಶದ ಪ್ರಥಮ ಪ್ರಜೆ ಆಗಿದ್ದಾರೆ. ಹಾಗಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದು ರಾಜಕೀಯ ಕಾರ್ಯಕ್ರಮ ಅನ್ನೋದಕ್ಕಿಂದ ಪಕ್ಷದ ಅಭಿಮಾನಿಗಳು, ಸಿದ್ದರಾಮಯ್ಯ ಅಭಿಮಾನಿಗಳು ಸೇರಿಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವ ರಾಜಕಾರಣ ಮಾಡೋದಕ್ಕಲ್ಲ. ಸಿದ್ದರಾಮಯ್ಯ ಸಾಹೇಬರಿಗೆ 75 ವರ್ಷ ಆಗಿದೆ. 40 ವರ್ಷಗಳ ಕಾಲ ರಾಜಕಾರಣ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಬೆಳಗಾವಿಯಿಂದ ಸುಮಾರು 50 ಸಾವಿರ ಜನರು ಹೋಗುತ್ತಾರೆ ಎಂದು ಹೆಬ್ಬಾಳ್ಕರ್​ ಹೇಳಿದರು.

ಓದಿ : ಪಿಎಸ್ಐ ಪರೀಕ್ಷೆ ಅಕ್ರಮ: ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಸಿಐಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.