ಅಥಣಿ: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಸ್ವಗ್ರಾಮದಲ್ಲೇ ಕುಮಟಳ್ಳಿಗೆ ಶಾಕ್ ನೀಡುವಂತೆ ಅವರ ವಿರುದ್ಧ ಬ್ಯಾನರ್ಗಳನ್ನು ಹಾಕಲಾಗಿದೆ.
ಅಥಣಿ ಕ್ಷೇತ್ರದಿಂದ ಕುಮಟಳ್ಳಿ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದು, ತೆಲಸಂಗ ಗ್ರಾಮದಲ್ಲಿ, 'ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರ. ಇಲ್ಲಿ ಹಣಕ್ಕಾಗಿ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶ ಇಲ್ಲ.' ಎಂದು ಗ್ರಾಮಸ್ಥರು ಬ್ಯಾನರ್ ಅಳವಡಿಸಿದ್ದಾರೆ.
ತೆಲಸಂಗ ಗ್ರಾಮದಲ್ಲಿ ಇಂದು ಗಜಾನನ ಮಂಗಸೂಳಿ ಪರ ಪ್ರಚಾರದ ಬೆನ್ನಲ್ಲೆ, ಮಹೇಶ ಕುಮಟಳ್ಳಿ ವಿರುದ್ದ ಈ ರೀತಿ ಬ್ಯಾನರ್ ಅಳವಡಿಸಲಾಗಿದೆ.